Thu. Dec 26th, 2024

ಅಕ್ಕನ ಮೇಲೆ ಹಲ್ಲೆ ಮಾಡಿ, ನಿಂದಿಸಿ ವಿಡಿಯೋ ಮಾಡಿದ‌ ಸಹೋದರ

Share this with Friends

ಮೈಸೂರು,ಮೇ.22: ವಕೀಲರ ಮುಂದೆಯೇ ಅಕ್ಕನ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬಟ್ಟೆ ಹರಿದ‌ ಸಹೋದರ ಅದನ್ನ ವಿಡಿಯೋ ಮಾಡಿದ‌ ವಿಚಿತ್ರ ಪ್ರಸಂಗ ನಗರದಲ್ಲಿ ನಡೆದಿದೆ.

ಈ ಘಟನೆ ಬೋಗಾದಿಯಲ್ಲಿ ನಡೆದಿದ್ದು,ಪರಿಸ್ಥಿತಿಯನ್ನ ನಿಯಂತ್ರಿಸಲು ಬಂದ ವಕೀಲರ ಮೇಲೂ ಹಲ್ಲೆ ನಡೆಸಿದ್ದಾನೆ.

ಹಲ್ಲೆಗೊಳಗಾದ ಮಹಿಳೆ ಸಹೋದರನ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಸರಸ್ವತಿಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ರಚನಾ ಹಾಗೂ ವಕೀಲ ಶರತ್ ರಾಜ್ ಎಂಬವರ ಮೇಲೆ ರಚನಾ ಸಹೋದರ ರಂಜಿತ್ ಹಲ್ಲೆ ನಡೆಸಿದ್ದಾನೆ.

ರಚನಾ ರವರು ತಮ್ಮ ವಕೀಲರಾದ ಶರತ್ ರಾಜ್ ಜೊತೆ ಕಾರಿನಲ್ಲಿ ತಮ್ಮ ಮನೆ ಮುಂದೆ ಬಂದು ಇಳಿಯುತ್ತಿದ್ದಾಗ ಏಕಾಏಕಿ ಬಂದ ರಂಜಿತ್ ಅವಾಚ್ಯ ಶಬ್ದಗಳನ್ನ ಬಳಿಸಿ ಅಕ್ಕನ ಕೂದಲು ಎಳೆದಾಡಿ ಕಾರಿನಿಂದ ಹೊರಕ್ಕೆ ಎಳೆದು ಹಲ್ಲೆ ನಡೆಸಿ ಬಟ್ಟೆ ಹರಿದುಹಾಕಿ ತನ್ನ ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಿಸಿದ್ದಾನೆ.

ಈ ವೇಳೆ ಬಿಡಿಸಲು ಬಂದ ವಕೀಲ ಶರತ್ ರಾಜ್ ಮೇಲೂ ಸಹ ರಂಜಿತ್ ಹಲ್ಲೆ ನಡೆಸಿದ್ದಾನೆ.ಅಕ್ಕಪಕ್ಕದ ಜನ ರಚನಾ ನೆರವಿಗೆ ಬಂದಿದ್ದಾರೆ.

ಈ ಘಟನೆ ಎದುರು ಮನೆಯಲ್ಲಿ ಅಳವಡಿಸಲಾಗಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರಬಹುದೆಂದು ಸ್ಥಳೀಯರು ತಿಳಿಸಿದ್ದಾರೆ.

ಸರಸ್ವತಿಪುರಂ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.


Share this with Friends

Related Post