Fri. Nov 1st, 2024

ಭಕ್ತರ ಮೊಬೈಲ್ ಕಸಿದು ಕಾಡಿಸಿದ ಮಂಗ!

Share this with Friends

ಮೈಸೂರು, ಮೇ 23: ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರಿಗೂ ಮೊಬೈಲ್ ಬೇಕು,ಆದರೆ ಇಲ್ಲೊಂದು ಮಂಗಕ್ಕೂ ಮೊಬೈಲ್ ಮೇಲೆ ಕಣ್ಣು.

ಹೌದು ಇದು ನಿಜ.ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಮಂಗವೊಂದು ಭಕ್ತರೊಬ್ಬರ ಮೊಬೈಲ್ ಕಸಿದು ಮರ ಏರಿ ಕುಳಿತು‌ಬಿಟ್ಟಿತು.

ಅದೇನೊ‌ ಗಾದೆ ಹೇಳ್ತಾರಲ್ಲಾ,ಬೆಕ್ಕಿಗೆ‌ಚೆಲ್ಲಾಟ ಇಲಿಗೆ ಪ್ರಾಣಸಂಕಟ ಅನ್ನೋಹಾಗೆ ಮಂಗ ಮೊಬೈಲ್ ಎಗರಿಸಿ ಭಕ್ತರಿಗೆ ಕೆಲಕಾಲ ಪೇಚಾಟ ತಂದೊಡ್ಡಿತು.

ಹಾಸನದಿಂದ ಬಂದ ಕುಟುಂಬ ತಾಯಿ‌ ಚಾಮುಂಡೇಶ್ವರಿ ದರುಶನ ಪಡೆಯಲು ಮೆಟ್ಟಿಲು ಮಾರ್ಗದಲ್ಲಿ ಸಾಗಲು ನಿಂತಿದ್ದರು.

ಪಾದದ ಬಳಿ ಇರುವ ಚಾಮುಂಡಿ ವಿಗ್ರಹಕ್ಕೆ ಪೂಜೆ ಸಲ್ಲಿಸುವ ವೇಳೆ ಮಹಿಳೆಯ ಕೈಲಿದ್ದ ಪರ್ಸ್ ಕಸಿದ ಕೋತಿ ಮರ ಏರಿಬಿಟ್ಟಿತು,ಜತೆಗೆ ಪರ್ಸ್ ನಲ್ಲಿದ್ದ ಒಂದೊಂದೇ ಪದಾರ್ಥಗಳನ್ನ ಬಿಸಾಡಿದೆ.ಆದರೆ ಮೊಬೈಲ್ ನೋಡಿದ್ದೇ ತಡ ಅದನ್ನ ಎಸೆಯದೆ ಜೋಪಾನವಾಗಿ ಹಿಡಿದುಕೊಂಡು ಕೊಂಬೆಯಿಂದ ಕೊಂಬೆಗೆ ಹಾರುತ್ತಾ ಭಕ್ತರನ್ನ ಕಾಡಿಸಿದೆ.

ಬಾಳೆಹಣ್ಣು ಕೊಟ್ಟರೂ ಮೊಬೈಲ್ ಬಿಡದ ಕೋತಿ ಕಪಿಚೇಷ್ಟೆ ಮುಂದುವರಿಸಿತು. ಸುಮಾರು ಅರ್ಧಗಂಟೆಗೂ ಹೆಚ್ಚುಹೊತ್ತು ಕೊನೆಗೂ ಮೊಬೈಲ್ ಬಿಸಾಡಿದೆ

ಸಧ್ಯ‌ ಕಡೆಗೂ ಮೊಬೈಲ್ ಸಿಕ್ಕಿತಲ್ಲಾ ಎಂದುಕೊಂಡು ಭಕ್ತರು ನೆಮ್ಮದಿಯಿಂದ ಮೆಟ್ಟಿಲು ಹತ್ತಿ ತಾಯಿ ಚಾಮುಂಡೇಶ್ವರಿ ದರ್ಶನಕ್ಕೆ ತೆರಳಿದರು.


Share this with Friends

Related Post