Fri. Nov 1st, 2024

ಜೈ ಭೀಮ್ ಜನಸ್ಪಂದನ ವೇದಿಕೆ ವತಿಯಿಂದ ಬುದ್ಧ ಜಯಂತಿ ಆಚರಣೆ

Share this with Friends

ಮೈಸೂರು, ಮೇ.23: ಮೈಸೂರಿನ ಗಾಂಧಿನಗರದಲ್ಲಿರುವ ಉರಿಲಿಂಗಿ ಪೆದ್ದೇಶ್ವರ ಮಠದಲ್ಲಿ ಜೈ ಭೀಮ್ ಜನಸ್ಪಂದನ ವೇದಿಕೆ ವತಿಯಿಂದ ಬುದ್ಧ ಜಯಂತಿ ಆಚರಿಸಲಾಯಿತು.

ಬುದ್ಧನ ಭಾವಚಿತ್ರಕ್ಕೆ ಮೈಸೂರು ವಿಶ್ವವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಸದಸ್ಯರಾದ ಸರತ್ ಸತೀಶ್,
ಪುಷ್ಪ ನಮನ ಸಲ್ಲಿಸಿದರು.

ಈ ವೇಳೆ ಮಾತನಾಡಿದ‌ ಅವರು ಭಗವಾನ್ ಗೌತಮ ಬುದ್ಧರು ಜಗತ್ತಿನ ಜನರಲ್ಲಿ ಆಳವಾಗಿ ಬೇರೂರಿದ್ದ ವೇದಗಳೆ ಪ್ರಮಾಣವೆಂಬ ನಂಬಿಕೆಯನ್ನು ಮತ್ತು ಅವುಗಳ ಅಧಿಕಾರವನ್ನು ತರ್ಕ ಬದ್ಧ ವಿಚಾರದಿಂದ ಸತ್ಯಾನ್ವೇಷಣೆ ಸಾಧ್ಯವೆಂಬುದನ್ನು ಸಾಧಿಸಿ ತೋರಿದ ಮಹಾನ್‌ ಚೇತನ ಎಂದು ಹೇಳಿದರು.

ತನ್ನ ತತ್ವ ಸಿದ್ಧಾಂತಗಳ ಮೂಲಕ ಇಡೀ ಏಷ್ಯಾಖಂಡಕ್ಕೆ ಜ್ಞಾನದ ಬೆಳಕು ಹೊತ್ತಸಿದ ಮಹಾನ ಜ್ಯೋತಿ ಎಂದು ಬಣ್ಣಿಸಿದರು.

ಜೈ ಭೀಮ್ ಜನಸ್ಪಂದನ ವೇದಿಕೆ ಅಧ್ಯಕ್ಷ ಚೇತನ್ ಕಾಂತರಾಜ್ ಮಾತನಾಡಿ ಬುದ್ಧನ ವಿಚಾರವು ಭಾವನಾತ್ಮಕ,ವೈಚಾರಿಕ,
ಆಧ್ಯಾತ್ಮಿಕ,ವೈಜ್ಞಾನಿಕ ವಿಚಾರಗಳಾಗಿದ್ದು,
ಸಮಾಜಮುಖಿ ಚಿಂತನೆ ಅವರ ಮೂಲ ಉದ್ದೇಶವಾಗಿತ್ತು ಎಂದು ಹೇಳಿದರು.

ಮೂಡ ಮಾಜಿ ಸದಸ್ಯ ಸಿ.ಜಿ.ಶಿವಕುಮಾರ್ ಮಾತನಾಡಿ, ಬುದ್ಧನ ಅಹಿಂಸ ಮಾರ್ಗವು ಎಲ್ಲಾ ವಿಶ್ವ ಪ್ರಸಿದ್ಧಿಯಾಗಿದ್ದು ಅದನ್ನು ಇಂದಿನ ಆಧುನಿಕ ಯುಗದಲ್ಲಿ ಬಳಸಬೇಕೆಂದು ಹೇಳಿದರು,

ಚಿಂತಕರಾದ ಸಿದ್ದರಾಜು ಅವರು ಮಾತನಾಡಿ ಒಬ್ಬ ಮಹಾರಾಜನಾಗಿ ಹುಟ್ಟಿ ಅಸಾಮಾನ್ಯ ಮನುಷ್ಯನಾಗೋದು ಸುಲಭವಲ್ಲ ಆದರೆ ಬುದ್ಧನು ಅದನ್ನು ಸಾಧಿಸಿದನು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬುದ್ಧನ ಪಂಚಶೀಲವನ್ನು ಹಿರಿಯರಾದ ಸ್ವಾಮಿಯವರು ನಡೆಸಿಕೊಟ್ಟರು.

ಮೈಸೂರು ಮಹಾನಗರ ಪಾಲಿಕೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಉದಯ್ ಕುಮಾರ್,ಕರ್ನಾಟಕ ಭೀಮ ಸೇನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ. ಮಂಜುನಾಥ್,ಯುವ ಮುಖಂಡರಾದ ಕಿರಣ್ ಕುಮಾರ್,ದಲಿತ ಸಂಘರ್ಷ ಸಮಿತಿಯ ರಮೇಶ್, ಹಿರಿಯರಾದ ನಾಗಣ್ಣ,ಸ್ವಾಮಿ,ರಮೇಶ್ ,ಕುಮಾರ್ ಮತ್ತಿತರರು ಭಾಗವಹಿಸಿದ್ದರು.


Share this with Friends

Related Post