Fri. Nov 1st, 2024

ಬಸವಾ ಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣ ಲಿಂಗೈಕ್ಯ

Share this with Friends

ಬೀದರ್,ಮೇ.23: ಬೀದರ್ ಬಸವಗಿರಿಯ ಬಸವಾ ಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣ ಅವರು ಲಿಂಗೈಕ್ಯರಾಗಿದ್ದಾರೆ.

ಇದರಿಂದಾಗಿ ಮತ್ತೊಂದು ಲಿಂಗಾಯತ ಧರ್ಮದ ಕೊಂಡಿಯನ್ನು ಕಳೆದುಕೊಂಡಂತಾಗಿದೆ ಎಂದು ನರಸಿಂಹರಾಜಪುರದ ಬಸವಕೇಂದ್ರದ ಬಸವಯೋಗಿಪ್ರಭುಗಳು ಅಕ್ಕ ಅನ್ನಪೂರ್ಣ ಅವರಿಗೆ ಶರಣಾಂಜಲಿ ಸಲ್ಲಿಸಿದ್ದಾರೆ.

ಅಕ್ಕ ಅನ್ನಪೂರ್ಣ ಅವರು
ಅತ್ಯುತ್ತಮ ಪ್ರವಚನಕಾರರಾಗಿ ಮನೆ ಮನಗಳಿಗೆ ಬಸವ ತತ್ವ ವನ್ನು ಬಿತ್ತುವ ಮೂಲಕ ಜನರ ಮನಸ್ಸಿನಲ್ಲಿ ಉಳಿದಿದ್ದಾರೆ ಎಂದು ಶ್ರೀಗಳು ಹೇಳಿದ್ದಾರೆ.

ಸಾಹಿತ್ಯ ಲೋಕಕ್ಕೂ ಅವರು ಅನೇಕ ಗ್ರಂಥ ನೀಡಿದ್ದಾರೆ. ಪ್ರಮುಖ ವಾಗಿ ಲಿಂಗಾಯತ ಧರ್ಮ ಗ್ರಂಥ ಗುರುವಚನ, ಹನ್ನೆರಡನೆಯ ಶತಮಾನದ ಶಿವಶರಣರ ಸಂಪದ ಗುರು ಬಸವಣ್ಣನ ಪೂಜಾವೃತ ಕನ್ನಡ ಹಾಗೂ ಮರಾಠಿ ಭಾಷೆಯಲ್ಲಿ ರಚಿಸಿದ್ದಾರೆ ಎಂದು ಅವರು ಸ್ಮರಿಸಿದ್ದಾರೆ.

ಅಕ್ಕ ಅನ್ನಪೂರ್ಣ ತಾಯಿಯವರು
ಲಿಂಗಾಯತ ಧರ್ಮದ ಹೋರಾಟದಲ್ಲಿ ಅವರು ಸಕ್ರಿಯವಾಗಿ ಭಾಗವಹಿಸಿದ್ದರು, ಅನೇಕ ಸಾಧಕರಿಗೆ ಬಸವ ತತ್ವ ಮಾರ್ಗ ತೋರಿಸಿದ್ದಾರೆ ಎಂದು ಬಸವಯೋಗಿಪ್ರಭುಗಳು ತಿಳಿಸಿದ್ದಾರೆ.


Share this with Friends

Related Post