Wed. Dec 25th, 2024

ಯಶಸ್ವಿನಿ ಸೋಮಶೇಖರ್ ಇನ್ನೂ ಮುಡಾ ಅಧ್ಯಕ್ಷರೆ?

Share this with Friends

ಮೈಸೂರು,ಮೇ.24: ಮುಡಾ ಅಧ್ಯಕ್ಷ ಸ್ಥಾನದಿಂದ ಯಶಸ್ವಿನಿ ಸೋಮಶೇಖರ್ ತೆರವಾಗಿ ವರ್ಷಗಳೇ ಉರುಳಿದೆ,ಆದರೆ ಅವರ ಮನೆ ಮುಂದೆ ನಾಮಫಲಕ ಬಾದಲಾಗಿಯೇ ಇಲ್ಲಾ.

ಈಗಾಗಲೇ ಇಬ್ಬರು ಅಧ್ಯಕ್ಷರು ಮುಡಾ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ.ಹೀಗಿದ್ದರೂ ಯಶಸ್ವಿನಿ ಸೋಮಶೇಖರ್ ತಮ್ಮ ಮನೆ ಮುಂದೆ ತಾವಿನ್ನೂ ಮುಡಾ ಅಧ್ಯಕ್ಷರು ಎಂಬಂತೆ ನಾಮಫಲಕ ಹಾಕಿಕೊಂಡಿದ್ದಾರೆ‌ ಇದು ಎಷ್ಟು ಸರಿ ಎಂದು ಜನ ಪ್ರಶ್ನಿಸುತ್ತಿದ್ದಾರೆ

ಮೈಸೂರಿನ ಎಂ.ಜಿ.ರಸ್ತೆಯಲ್ಲಿರುವ ಅವರ ನಿವಾಸದ ಮುಂದೆ ಇನ್ನೂ ನಾಮಫಲಕ ರಾರಾಜಿಸುತ್ತಿದೆ.ಒಬ್ಬ ಜವಾಬ್ದಾರಿಯುತ ಪ್ರತಿನಿಧಿಯಾಗಿ ಮಾಜಿ ಆಗಿದ್ದರೂ ಇನ್ನೂ ನಾಮಫಲಕ ಬದಲಿಸದಿರುವುದು ದುರ್ದೈವ.

ಜನನಿಬಿಡ ಪ್ರದೇಶದಲ್ಲಿ ತಮ್ಮ ನಿವಾಸವಿದ್ದರೂ ಸಾರ್ವಜನಿಕರಿಗೆ ನಾಮಫಲಕದಲ್ಲಿ ತಪ್ಪು ಮಾಹಿತಿ ನೀಡುತ್ತಿರುವ ಯಶಸ್ವಿನಿ ಸೋಮಶೇಖರ್ ಇನ್ನಾದರೂ ಎಚ್ಚೆತ್ತುಕೊಳ್ಳುವರೇ ಕಾದು ನೋಡಬೇಕಿದೆ.


Share this with Friends

Related Post