Wed. Dec 25th, 2024

ಅರಮನೆ ಮಂಡಳಿ ಕಚೇರಿ ಮೇಲೆ ಲೋಕಾಯುಕ್ತ ದಾಳಿ

Share this with Friends

ಮೈಸೂರು,ಮೇ.24: ಮೈಸೂರು ಅರಮನೆ ಮಂಡಳಿ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ದಾಳಿ ನಡೆಸಿದ ವೇಳೆ ಪ್ರವೇಶ ಧ್ವಾರ ಹಾಗೂ ಪಾರ್ಕಿಂಗ್ ಲಾಟ್ ನಲ್ಲಿ ಯಾವುದೇ ಲೆಕ್ಕ ಇಡದ 4.10 ಲಕ್ಷ ನಗದು ದೊರೆತಿದೆ.

ಪ್ರವೇಶ ಟಿಕೆಟ್ ಹಾಗೂ ಪಾರ್ಕಿಂಗ್ ನಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ ಎಂಬ ದೂರಿನ ಮೇಲೆ ಲೋಕಾಯುಕ್ತ ಎಸ್ಪಿ ಸಚಿತ್ ರವರ ಮಾರ್ಗದರ್ಶನದಲ್ಲಿ ದಾಳಿ ನಡೆದಿದೆ.

ಮೈಸೂರು ,ಚಾಮರಾಜನಗರ, ಮಂಡ್ಯ ಹಾಗೂ ಮಡಿಕೇರಿ ಲೋಕಾಯುಕ್ತ ಡಿವೈಎಸ್ಪಿ ಗಳು ಹಾಗೂ ಅಧಿಕಾರಿಗಳು, ಸಿಬ್ಬಂದಿ ಕಾರ್ಯಾಚರಣೆ ಮಾಡಿದ್ದಾರೆ.


Share this with Friends

Related Post