ಮೈಸೂರು, ಮೇ.24: ದಕ್ಷಿಣ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿರುವ ಕೆ ವಿವೇಕಾನಂದ ಕಾಲೇಜುಗಳಲ್ಲಿ ಮತಯಾಚಿಸಿದರು
ನಗರದ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜು, ಮೈಸೂರು ವಿಶ್ವವಿದ್ಯಾಮಿಲಯ, ಮಾನಸ ಗಂಗೋತ್ರಿ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ, ಸರ್ಕಾರಿ ಐಟಿಐ ಮತ್ತು ಡಿಪ್ಲೊಮಾ ಕಾಲೇಜು ಮತ್ತಿತರ ಶಿಕ್ಷಣ ಸಂಸ್ಥೆಗಳ ಅಧ್ಯಾಪಕರು ಹಾಗೂ ಶಿಕ್ಷಕರಲ್ಲಿ ಮತಯಾಚನೆ ಮಾಡಿದರು
ಈ ವೇಳೆ ವಿವೇಕಾನಂದ ಅವರು ಮಾತನಾಡಿ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಲು,ಅವರ ಬೇಡಿಕೆಗಳನ್ನ ಆಲಿಸಲು ಶಿಕ್ಷಣ ತಜ್ಞರ ಸಮಿತಿ ಮುಖೇನ ಜಿಲ್ಲಾ ತಾಲ್ಲೂಕು ಮಟ್ಟದಲ್ಲಿ ಶಿಕ್ಷಕರ ಸಹಾಯವಾಣಿ ಸ್ಥಾಪಿಸಲಾಗುವುದು ಎಂದು ಹೇಳಿದರು.
ಸರ್ಕಾರದಿಂದ ಶಿಕ್ಷಕರಿಗೆ ಸಿಗಬೇಕಾದ ಸವಲತ್ತುಗಳು, ಹಲವಾರು ವರ್ಷಗಳ ಶಿಕ್ಷಕರ ಬೇಡಿಕೆಗಳನ್ನ ಈಡೇರಿಸಲು ಮೇಲ್ಮನೆಯಲ್ಲಿ ಧ್ವನಿಯೆತ್ತಲು ಸೂಕ್ತ ವ್ಯಕ್ತಿ ಆಯ್ಕೆಗೆ ಬದಲಾವಣೆಯ ಕಾಲ ಬಂದಿದ್ದು ವಿಧಾನಪರಿಷತ್ ಚುನಾವಣೆಯಲ್ಲಿ ಮೊದಲ ಪ್ರಾಶಸ್ತ್ಯ ಮತಗಳನ್ನು ನೀಡಬೇಕೆಂದು ಮನವಿ ಮಾಡಿದರು,
ಶಿಕ್ಷಕರಾದ ಕೃಷ್ಣಕುಮಾರ್ ಕೇಶವಮೂರ್ತಿ, ಪ್ರದೀಪ್ ನಾಗರ್ಜುನ, ಬಾಲಸುಬ್ರಹ್ಮಣ್ಯ ಮಂಜುನಾಥ್, ಯಶ್ ಪಾಲ್, ಶಿವಣ್ಣೆಗೌಡ, ಪ್ರವಾಸಿ ಮಂಜು,ಬಿಜೆಪಿ ಮಹಿಳಾ ನಗರ ಉಪಾಧ್ಯಕ್ಷರಾದ ಹೇಮಾ ನಂದೀಶ್, ರಶ್ಮಿ, ಅನು ಮತ್ತಿರರು ಹಾಜರಿದ್ದರು.