ಮೈಸೂರು,ಮೇ.24: ಮೈಸೂರು ಶವಾಗಾರದ ಶೀತಲ ಯಂತ್ರಗಳು ಕೊನೆಗೂ ರಿಪೇರಿಯಾಗಿದ್ದು,ಸಿಬ್ಬಂದಿಗಳು ನಿಟ್ಟುಸಿರು
ಬಿಟ್ಟಿದ್ದಾರೆ.
ದುರಸ್ಥಿಗೆ ಬಂದಿದ್ದ ಮೂರು ಯಂತ್ರಗಳನ್ನ ಸರಿಪಡಿಸಿದ ಅಧಿಕಾರಿಗಳು ಯಥಾಸ್ಥಿತಿಗೆ ತಂದಿದ್ದಾರೆ ಇದರಿಂದ ಜನರಿಂದ ಜನರು ಶಾಪ ಹಾಕುವುದು ತಪ್ಪಿದಂತಾಗಿದೆ.
ಮೈಸೂರು ಮೆಡಿಕಲ್ ಕಾಲೇಜಿನ ಆವರಣದಲ್ಲಿರುವ ಶವಾಗಾರದ ಶೀತಲ ಯಂತ್ರಗಳು ಕೆಟ್ಟುನಿಂತ ಬಗ್ಗೆ ಇತ್ತೀಚೆಗೆ ನವಯುಗ ನ್ಯೂಸ್ ವರದಿ ಮಾಡಿತ್ತು.
ಮೂರು ಯಂತ್ರಗಳ ಪೈಕಿ ಎರಡು ಯಂತ್ರಗಳು ಕೈಕೊಟ್ಟ ಪರಿಣಾಮ ಮೃತದೇಹಗಳು ಕೊಳೆತು ದುರ್ನಾತ ಬೀರುತ್ತಿವೆ ಎಂದು ವರದಿ ಮಾಡಲಾಗಿತ್ತು.
ಎಚ್ಚೆತ್ತ ಡೀನ್ ಡಾ.ದಾಕ್ಷಾಯಿಣಿ ಅವರು ದುರಸ್ಥಿಗೆ ಬಂದ ಯಂತ್ರಗಳನ್ನ ಸುಸ್ಥಿತಿಗೆ ತಂದಿದ್ದಾರೆ.ಕೊಳೆತು ದುರ್ವಾಸನೆ ಬೀರುತ್ತಿದ್ದ ಮೃತದೇಹಗಳ ಮಧ್ಯೆ ಸಿಬ್ಬಂದಿ ಕೆಲಸ ಮಾಡಬೇಕಿತ್ತು.ಅಲ್ಲದೆ ಶವಪರೀಕ್ಷೆ ನಂತರ ಮೃತದೇಹಗಳನ್ನ ಕೊಂಡೊಯ್ಯಲು ಬರುತ್ತಿದ್ದ ಸಂಭಂಧಿಕರಿಗೂ ದುರ್ವಾಸನೆ ತಡೆಯಲಾಗದೆ ಶಾಪ ಹಾಕುತ್ತಿದ್ದರು.
ಈಗ ಶೀತಲ ಯಂತ್ರಗಳು ರಿಪೇರಿಯಾಗಿದ್ದು ಮೃತದೇಹಗಳು ಕೊಳೆಯದಂತೆ ಸಂರಕ್ಷಿಸಬಹುದಾಗಿದೆ.