Wed. Dec 25th, 2024

ಎರಡು ಗುಂಪಿನ ನಡುವೆ ಗ್ಯಾಂಗ್ ವಾರ್

Share this with Friends

ಉಡುಪಿ,ಮೇ.25: ಎರಡು ಗುಂಪಿನ ನಡುವೆ ಭಯಾನಕ ಗ್ಯಾಂಗ್ ವಾರ್ ನಡೆದಿರುವ ಘಟನೆ ಉಡುಪಿಯ ಕುಂಜಿಬೆಟ್ಟುವಿನಲ್ಲಿ ನಡೆದಿದೆ.

ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಕಾಪು ಮೂಲದ ಎರಡು ಬಣದ ಯುವಕರು ಉಡುಪಿ- ಮಣಿಪಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರುಗಳಲ್ಲಿ ಬಂದು ಕಾರುಗಳನ್ನು ಒಂದಕ್ಕೊಂದು ಡಿಕ್ಕಿ ಹೊಡೆಸಿ ಜಗಳ ಮಾಡಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಎರಡೂ ಕಾರಿನವರಮ್ನು ಬಂಧಿಸಿದ್ದು, ಅವರನ್ನು ಜೂನ್ 1ರವರೆಗೆ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.


Share this with Friends

Related Post