Wed. Dec 25th, 2024

ರೇವ್ ಪಾರ್ಟಿ ಪ್ರಕರಣ-ಐವರ ಬ್ಯಾಂಕ್ ಅಕೌಂಟ್ ಸೀಜ್

Share this with Friends

ಬೆಂಗಳೂರು,ಮೇ.25: ಬೆಂಗಳೂರಿನ ಫಾರ್ಮ್‍ಹೌಸ್‍ನಲ್ಲಿ ನಡೆದ ರೇವ್ ಪಾರ್ಟಿ ಪ್ರಕರಣ‌ ಸಂಬಂಧ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ.

ಬಂಧಿತ ಐವರು ಆರೋಪಿಗಳ ಅಕೌಂಟ್‍ನಲ್ಲಿದ್ದ ಹಣವನ್ನು ಸಿಸಿಬಿ ಪೊಲೀಸರು ಸೀಜ್ ಮಾಡಿದ್ದಾರೆ.

ಆರೋಪಿಗಳ ಅಕೌಂಟ್‍ನಲ್ಲಿ ಲಕ್ಷಲಕ್ಷ ಹಣ ಪತ್ತೆಯಾಗಿತ್ತು. ಹಾಗಾಗಿ ಸಿಸಿಬಿ ಅಧಿಕಾರಿಗಳು ಎಲ್ಲಾ ಅಕೌಂಟ್‍ಗಳನ್ನ ಫ್ರೀಜ್ ಮಾಡಿಸಿದ್ದಾರೆ. ಅಲ್ಲದೆ ಆರೋಪಿಗಳ ಮೊಬೈಲ್ ಮಿರರ್ ಇಮೇಜ್ ಮಾಡಿಸಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ತಿಳಿದು‌ ಬಂದಿದೆ.

ಆರೋಪಿಗಳು ಮತ್ತೆ ಎಲ್ಲೆಲ್ಲಿ ರೇವ್ ಪಾರ್ಟಿ ಮಾಡಿಸಿದ್ದರು, ಯಾರೆಲ್ಲ ಭಾಗಿಯಾಗಿದ್ದರು, ಪಾರ್ಟಿಗಾಗಿ ಎಷ್ಟು ಹಣ ವಸೂಲಿ ಮಾಡ್ತಿದ್ದರು ಡ್ರಗ್ಸ್ ಹೇಗೆ ಎಲ್ಲಿಂದ ಸರಬರಾಜಾಗುತ್ತಿತ್ತು ಇತ್ಯಾದಿ ಮಾಹಿತಿ ಪತ್ತೆ ಮಾಡಲು ಮೊಬೈಲ್ ಮಿರರ್ ಇಮೇಜಿಂಗ್ ಮಾಡಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಸೋಮವಾರ ಕೋರ್ಟ್ ಗೆ ಅರ್ಜಿ ಹಾಕಿ ಆರೋಪಿಗಳನ್ನ ಕಸ್ಟಡಿಗೆ ಪಡೆಯಲು ಸಿಸಿಬಿ ನಿರ್ಧರಿಸಿದೆ,ನಂತರ ನಟಿ ಹೇಮ ಸೆರಿದಂತೆ ಪಾರ್ಟಿಯಲ್ಲಿದ್ದವರಿಗೆ ನೋಟಿಸ್ ನೀಡಲು ಸಿದ್ಧತೆ ನಡೆದಿದೆ.

ವಾಸು ಎಂಬಾತನ ಹುಟ್ಟುಹಬ್ಬದ ಅಂಗವಾಗಿ ರೇವ್ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಪಾರ್ಟಿಯಲ್ಲಿ ನೂರರಿಂದ ನೂರೈವತ್ತು ಮಂದಿ ಜಮಾವಣೆಗೊಂಡಿದ್ದರು.ರೇವ್ ಪಾರ್ಟಿಯಲ್ಲಿ ಎಂಡಿಎಂಎ, ಕೊಕೇನ್ ಮತ್ತಿತರ ಮಾದಕ ವಸ್ತು ಪತ್ತೆಯಾಗಿತ್ತು.


Share this with Friends

Related Post