Fri. Nov 1st, 2024

ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆ ಜಾನಪದ, ರಂಗಭೂಮಿ ಬಗ್ಗೆ ಆಸಕ್ತಿ ಬೆಳೆಸಿ:ಪ್ರೇಮ್

Share this with Friends

ಮೈಸೂರು, ಮೇ.25:‌ ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಜೊತೆಯಲ್ಲೆ ಸಂಸ್ಕೃತಿ, ಜಾನಪದ ಕಲೆ, ರಂಗಭೂಮಿ ಬಗ್ಗೆ ಆಸಕ್ತಿ ಮೂಡಿಸಬೇಕೆಂದು ಚಿತ್ರನಟ ನೆನಪಿರಲಿ ಪ್ರೇಮ್ ಸಲಹೆ ನೀಡಿದರು.

ನಗರದ ಬನ್ನೂರು ರಸ್ತೆಯಲ್ಲಿರುವ ಎ ಟಿ ಎಂ ಇ ಇಂಜಿನಿಯರಿಂಗ್ ಕಾಲೇಜಿನ ವಾರ್ಷಿಕ ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮದಲ್ಲಿ
ಪ್ರೇಮ್ ಮಾತನಾಡಿದರು.

ಶಿಕ್ಷಣದ ಜೊತೆಜೊತೆಯಲ್ಲೆ ಸಾಂಸ್ಕೃತಿಕತೆ ಜನಪದ ಕಲೆ ರಂಗಭೂಮಿ ಆಸಕ್ತಿ ಮೂಡುವಂತೆ ವಿದ್ಯಾರ್ಥಿಗಳಲ್ಲಿ ಕಲಿಯುವ ಮನೋಭಾವ ಹೆಚ್ಚಿಸಬೇಕು ಅದಕ್ಕೆ ಎಟಿಎಮ್ಇ ಶಿಕ್ಷಿಣ ಸಂಸ್ಥೆ ಸಾಕ್ಷಿಯಾಗಿದೆ ಎಂದು ಶ್ಲಾಘಿಸಿದರು.

ಚಿತ್ರರಂಗದಲ್ಲಿ ನಟನಟಿಯರು ನಿರ್ದೇಶಕ ನಿರ್ಮಾಪಕರು ಹೆಚ್ಚಾಗಿ ಇಂಜಿನಿಯರಿಂಗ್ ವ್ಯಾಸಾಂಗ ಮಾಡಿ ಬಂದವರು ಎಂಬ ಪ್ರತೀತಿಯಿದೆ, ಮುಂದಿನ ದಿನದಲ್ಲಿ ಎನ್.ಟಿ.ಎಮ್.ಇ ಯುವ ಕಲಾವಿದರ ಪ್ರತಿಭೆಗೆ ನಾನು ಪ್ರೋತ್ಸಾಹ ನೀಡುತ್ತೇನೆ ಮತ್ತೊಮ್ಮೆ ನಾನು ಕಾಲೇಜಿನ ವಾರ್ಷಿಕ ಆಚರಣೆಗೆ ಬರುತ್ತೇನೆ ಎಂದು ಪ್ರೇಮ್ ತಿಳಿಸಿದರು.

ಸಮಾಜ ಸೇವಕರಾದ ಬನ್ನೂರು ಮಹೇಂದ್ರ ಸಿಂಗ್ ಕಾಳಪ್ಪ ಅವರ ಸಾಮಾಜಿಕ ಸೇವೆಯನ್ನು ಶ್ಲಾಘಿಸಿದರು.

ಇದೇ ಸಂದರ್ಭದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಕಾಲೇಜು ವತಿಯಿಂದ ಸಹಾಯಧನ ಮಾಡಲಾಯಿತು.

ನೆನಪಿರಲಿ ಪ್ರೇಮ್ ಅವರ ಪತ್ನಿ ಜ್ಯೋತಿ ಪ್ರೇಮ್, ಸೈಕಲ್ ಪ್ಯೂರ್ ಅಗರಬತ್ತಿ ಸಂಸ್ಥೆಯ ಅಧ್ಯಕ್ಷರಾದ ಆರ್ ಗುರು , ಕೃಷ್ಣ ಗ್ರೂಪ್ಸ್ ಆಫ್ ಹಾಸ್ಪಿಟಲ್ ಮ್ಯಾನೇಜಿಂಗ್ ಟ್ರಸ್ಟಿ ಡಾ. ಸುರೇಶ್ ಶೆಟ್ಟಿ, ರಾಜ್ಯ ಸರ್ಕಾರದ ಆಯುರ್ವೇದ ಸೆಂಟರ್ ಸಹಾಯಕ ನಿರ್ದೇಶಕ ಡಾ. ಲಕ್ಷ್ಮೀನಾರಾಯಣ್ ಶೆಣೈ ಭಾಗವಹಿಸಿದ್ದರು,

ಅಧ್ಯಕ್ಷತೆಯನ್ನು ಎ ಟಿ ಎಂ ಇ ಇಂಜಿನಿಯರಿಂಗ್ ಕಾಲೇಜಿನ ಅಧ್ಯಕ್ಷರಾದ ಎಲ್ ಅರುಣ್ ಕುಮಾರ್ ವಹಿಸಿದ್ದರು.


Share this with Friends

Related Post