Tue. Dec 24th, 2024

ವೇಶ್ಯಾವಾಟಿಕೆ:ಸ್ಪಾ ಮೇಲೆ ವಿಜಯನಗರ ಪೊಲೀಸರ‌ ದಾಳಿ

Share this with Friends

ಮೈಸೂರು, ಮೇ.26: ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ.

ಮೈಸೂರಿನ ವಿಜಯನಗರದ ರಾಯಲ್ ಇಷಾ ಸ್ಪಾ ಮೇಲೆ ಪೊಲೀಸರು ದಾಳಿ ನಡೆಸಿ, ಐವರು ಯುವತಿಯರನ್ನು ರಕ್ಷಣೆ ಮಾಡಿದ್ದಾರೆ.

ಈ ವೇಳೆ 5 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ, ಈ ಪೈಕಿ ಇಬ್ಬರು ಟ್ರಾಫಿಕರ್ಸ್, ಇಬ್ಬರು ಗಿರಾಕಿಗಳು ಹಾಗೂ ಒಬ್ಬ ಪಿಂಪ್ ಎಂದು ಪೊಲೀಸರು ತಿಳಿಸಿದ್ದಾರೆ.

ವೇಶ್ಯಾವಾಟಿಕೆ ದಂಧೆ ಬಗ್ಗೆ ಒಡನಾಡಿ ಸಂಸ್ಥೆಗೆ ನಾಗರೀಕರು ದೂರು ನೀಡಿದ್ದರು.ಎಸಿಪಿ ಗಜೇಂದ್ರಪ್ರಸಾದ್ ನೇತೃತ್ವದಲ್ಲಿ‌ ವಿಜಯನಗರ ಪೊಲೀಸರು ದಾಳಿ ನಡೆಸಿದರು, ಒಡನಾಡಿ ಸಂಸ್ಥೆಯವರು ಕೂಡಾ ದಾಳಿ ವೇಳೆ ಹಾಜರಿದ್ದರು.


Share this with Friends

Related Post