ಮೈಸೂರು,ಮೇ.27: ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಬ್ಯೂಟಿಷಿಯನ್ ವೃತ್ತಿ ಸಹಕಾರಿ ಎಂದು ಪಾಲಿಕೆ ಮಾಜಿ ಸದಸ್ಯೆ ಪ್ರಮೀಳಾ ಭರತ್ ತಿಳಿಸಿದರು.
ಬ್ಯೂಟಿಷಿಯನ್ ವೃತ್ತಿ ಮೂಲಕ ತಮ್ಮ ಮಕ್ಕಳಿಗೆ ಉಜ್ವಲವಾದ ಭವಿಷ್ಯ ನೀಡಲು ಸಾಧ್ಯವಾಗಲಿದೆ ಎಂದು ಹೇಳಿದರು.
ಸಮೃದ್ಧಿ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ಮಹಾತ್ಮ ಗಾಂಧಿ ಅಂಬೇಡ್ಕರ್ ಸಮುದಾಯ ಭವನದಲ್ಲಿ ಬ್ಯೂಟಿಷಿಯನ್ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕುಟುಂಬದ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಅತಿ ಮುಖ್ಯ, ಈ ಹಿಂದೆ ಮನೆಗೆಲಸಕ್ಕಷ್ಟೇ ಸೀಮಿತವಾಗಿದ್ದ ಮಹಿಳೆ ಪ್ರಸ್ತುತ ಎಲ್ಲ ಕ್ಷೇತ್ರಗಳಲ್ಲಿಯೂ ಕೆಲಸ ನಿರ್ವಹಿಸುತ್ತಿದ್ದಾಳೆ ಎಂದು ಹೇಳಿದರು.
ಬ್ಯೂಟಿಷಿಯನ್ ತರಬೇತಿಗೆ ಮಹಿಳೆಯರು ಕೇವಲ ಪ್ರಮಾಣಪತ್ರ ಪಡೆಯಲು ಬರಬಾರದು. ಅನುಭವಿ ತರಬೇತುದಾರರಿಂದ ತರಬೇತಿ ಪಡೆದು, ವೃತ್ತಿಯಲ್ಲಿ ಗುಣಮಟ್ಟ ಕಾಯ್ದುಕೊಂಡಾಗ ಹೆಚ್ಚು ಗ್ರಾಹಕರನ್ನು ತಲುಪಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಮೈಸೂರು ಬ್ಯೂಟಿಶಿಯನ್ ಅಸೋಸಿಯೇಷನ್ ನಿರ್ದೇಶಕಿ ಮಾಲಿನಿ ಪಾಲಾಕ್ಷ, ಕೆಎಂಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಸಮೃದ್ಧಿ ಸೇವಾ ಸಮಿತಿ ಟ್ರಸ್ಟ್ ನ ಗೌರವಾಧ್ಯಕ್ಷ ಕಾಂತಿಲಾಲ್ ಜೈನ್, ಸಂಸ್ಥೆಯ ಸಲಹೆಗಾರ ಗುಂಡು ವೆಂಕಟೇಶ್ ಕುಮಾರ್,ಕಾರ್ಯದರ್ಶಿ ಜ್ಯೋತಿ, ಸಹಕಾರ್ಯದರ್ಶಿ ಚರಣ್, ಖಜಾಂಜಿ ಗಾಯಿತ್ರಿ, ನಿರ್ದೇಶಕ ರಾಜೇಶ್, ಸಂಚಾಲಕ ಎನ್ ಭರತ್, ದಾಕ್ಷಾಯಿಣಿ, ರಚನಾ, ಸುಶೀಲ ,ವಿನುತ್ ಮತ್ತಿತರರು ಹಾಜರಿದ್ದರು.