Tue. Dec 24th, 2024

ಚನ್ನಗಿರಿ ಘಟನೆ:ಮೂವರು ಪೊಲೀಸ್ ಅಧಿಕಾರಿಗಳ ತಲೆದಂಡ

Share this with Friends

ದಾವಣಗೆರೆ,ಮೇ.27: ದಾವಣಗೆರೆಯ ಚನ್ನಗಿರಿ ಪೊಲೀಸ್ ಠಾಣೆ ಮೇಲೆ ದಾಂಧಲೆ ಪ್ರಕರಣ ಸಂಬಂಧ ಮೂವರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

ಚನ್ನಗಿರಿ ಡಿವೈಎಸ್ ಪಿ ಪ್ರಶಾಂತ್, ಸರ್ಕಲ್ ಇನ್ಸ್ ಪೆಕ್ಟರ್ ಬಿ.ನಿರಂಜನ ಹಾಗೂ ಎಸ್ ಐ ಅಖ್ತರ್ ಅವರನ್ನು ಅಮಾನತುಗೊಳಿಸ ಲಾಗಿದೆ ಎಂದು ಪೂರ್ವ ವಲಯ ಐಜಿಪಿ ಡಾ.ತ್ಯಾಗರಾಜನ್ ತಿಳಿಸಿದ್ದಾರೆ.

ಮೇ 24ರಂದು ಚನ್ನಗಿರಿ ಪೊಲೀಸ್ ವಶದಲ್ಲಿದ್ದ ವ್ಯಕ್ತಿ ಆದಿಲ್ ಎಂಬಾತ ಸಾವನ್ನಪ್ಪಿದ್ದ. ಇದು ಲಾಕಪ್ ಡೆತ್ ಎಂದು ಆರೋಪಿಸಿ ವ್ಯಕ್ತಿಯ ಸಂಬಂಧಿಕರು ಠಾಣೆಯ ಮೇಲೆ ದಾಳಿ ನಡೆಸಿ ನಡೆಸಿದ್ದರು.

ಆಗ‌ ಹಲವು ಪೊಲೀಸ್ ವಾಹನಗಳು ಜಖಂ ಗೊಂಡಿದ್ದವು. ಈ ಪ್ರಕರಣದಲ್ಲಿ ಪೊಲೀಸರು ಎಫ್ಐಆರ್ ಇಲ್ಲದೇ ವ್ಯಕ್ತಿಯನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದು ತಪ್ಪು. ಈ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದರು. ಅದರಂತೆ ಪೊಲೀಸರು ಅಮಾನತುಗೊಂಡಿದ್ದಾರೆ.


Share this with Friends

Related Post