Sat. Jan 11th, 2025

ಶಾಸಕರ ಎದುರಲ್ಲೇ ಮಾಧ್ಯಮದವರಿಗೆ ಧಮ್ಕಿ ಹಾಕಿದ ಕಾಂಗ್ರೆಸ ಶಾಸಕರ‌ ಆಪ್ತ

Share this with Friends

ಬೆಳಗಾವಿ: ಕಾಂಗ್ರೆಸ್ ಶಾಸಕರ ಆಪ್ತನೊಬ್ಬ ಶಾಸಕರ ಎದುರೇ ಮಾಧ್ಯಮದವರಿಗೆ ಧಮ್ಕಿ ಹಾಕಿದ ಘಟನೆ ನಡೆದ ಘಟನೆ ಬೆಳಕಿಗೆ ಬಂದಿದೆ.

ಕಾಗವಾಡ ಶಾಸಕ‌ ರಾಜು ಕಾಗೆ ಬೆವನೂರು ಗ್ರಾಮದ ಶ್ರೀ ಅಮೋಘ ಸಿದ್ದೇಶ್ವರ ಜಾತ್ರೆಯಲ್ಲಿ ಭಾಗಿಯಾಗಿದ್ದರು. ಈ ಸಮಯದಲ್ಲಿ ಶಾಸಕರ ಆಪ್ತ ಸಂತೋಷ್ ಚೂರಮೋಲೆ ಮಾಧ್ಯಮದವರು ರಾಜು ಕಾಗೆ ಅವರನ್ನ ಬೇರೆ ಬೇರೆ ರೀತಿಯಲ್ಲಿ ತೂರಿಸಿದ್ರ ಅವರನ್ನ ಮನೆಗೆ ಹೋಗಿ ಕೈ ಕಾಲು ಮುರಿದು, ಹೊಡ್ತೀವಿ ಎಂದು ಮಾಧ್ಯಮ ದವರಿಗೆ ಬೆದರಿಕೆ ಹಾಕಿದ್ದಾನೆ.

ಕಾಗವಾಡ ಮತಕ್ಷೇತ್ರದ ಗ್ರಾಮವೊಂದರಲ್ಲಿ ಶಾಸಕ ರಾಜು ಕಾಗೆ ಅವರು ಮುಂದೆ ನಿಂತು ಬೆಂಬಲಿಗನ ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗ್ತಾ ಇದ್ದು ಶಾಸಕ ರಾಜು ಕಾಗೆ ಆಪ್ತನ ಈ ನಡೆಗೆ ತ್ರೀವ ವಿರೋಧ ವ್ಯಕ್ತವಾಗುತ್ತಿದೆ.


Share this with Friends

Related Post