Mon. Dec 23rd, 2024

ಪಂಚಾಯಿತಿ ಮುಂದೆ ಕಸ ಹಾಕಿ ಆಕ್ರೋಶ ಹೊರ‌ ಹಾಕಿದ ಗ್ರಾಮಸ್ಥ

Share this with Friends

ಬೆಳಗಾವಿ: ಕಸ ಕ್ಲೀನ್ ಮಾಡದ ಪಂಚಾಯತ್ ಸಿಬ್ಬಂದಿಗಳು ವಿರುದ್ದ ಗ್ರಾಮಸ್ಥನೋರ್ವ ಆಕ್ರೋಶ ವ್ಯಕ್ತಪಡಿಸಿ ಗ್ರಾಮ‌ ಪಂಚಾಯತ ಮುಂದೆ ಕಸ ತಂದು ಸುರಿದ ಘಟನೆ ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ವಾರ್ಡ‌ ನಂ-2 ರ ನಿವಾಸಿ ಪ್ರಕಾಶ ಕಾಂಬಳೆ ಸಾಕಷ್ಟು ಬಾರಿ ಅಧಿಕಾರಿಗಳಿಗೆ ಕಸದ ಸ್ವಚ್ಛಗೊಳಿಸಿ ಎಂದು ಮನವಿ ಮಾಡಿದರು ಅಧಿಕಾರಿಗಳು ಸ್ಪಂದಿಸದ ಕಾರಣ ಗ್ರಾಂ ಪಂ ಮುಂದೆಯೇ ಕಸ, ಕೂಳಚೇ ಸುರಿದು ಆಕ್ರೋಶ ಹೊರಹಾಕಿದ್ದಾನೆ.
ಇನ್ನು ಈ ಘಟನೆಯಿಂದ ಅಧಿಕರಿಗಳು ಮುಜುಗರಕ್ಕೆ ಒಳಗಾಗಿದ್ದು. ಇನ್ನು ಮುಂದೆ ಕಸ ಸ್ವಚ್ಛತೆ ಬಗ್ಗೆ ಯಾವ ರೀತಿ ಕ್ರಮಕೈಗೊಳ್ಳುತ್ತಾರೆ ಎಂದು ಕಾದುನೋಡಬೇಕಿದೆ.


Share this with Friends

Related Post