Mon. Dec 23rd, 2024

ವೀರ ಸಾವಾರ್ಕರ್ ಅನುಭವಿಸಿದ ಕರಿನೀರ ಶಿಕ್ಷೆ: ಯುವ ಪೀಳಿಗೆ ಸ್ಮರಿಸಲಿ:ಸಂಜಯ್

Share this with Friends

ಮೈಸೂರು, ಮೇ.28: ವೀರ ಸಾವರ್ಕರ್ ರವರು 2 ಬಾರಿ ಅನುಭವಿಸಿದ ಕರಿನೀರ ಶಿಕ್ಷೆ ಯನ್ನು ಇಂದಿನ ಯುವ ಪೀಳಿಗೆ ನೆನೆಯಬೇಕಿದೆ ಎಂದು ಶ್ರೀರಾಮ ಸೇನೆ ಯ ರಾಜ್ಯ ಕಾರ್ಯದರ್ಶಿಗಳಾದ ಸಂಜಯ್ ತಿಳಿಸಿದರು.

ವೀರ ಸಾವಾರ್ಕರ್ ಯುವ ಬಳಗದ ವತಿಯಿಂದ ಇಂದು ಹಮ್ಮಿಕೊಂಡಿದ್ದ ಸಾವಾರ್ಕರ್ ರವರ ೧೪೪ ನೇ ಜಯಂತಿಯನ್ನು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದ ಬಳಿ ವೀರ ಸಾವರ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ಸ್ವಾತಂತ್ರ ಹೋರಾಟಕ್ಕೆ ಕ್ರಾಂತಿಕಾರಿಗಳ
ಕೊಡುಗೆ ಮರೆಯಬಾರದು ಎಂದು ತಿಳಿಸಿದರು.

ಯುವ ಮುಖಂಡ ಮಧು ಸೋಮಶೇಖರ್ ಮಾತನಾಡಿ, ಇಂದಿನ ಯುವಕರು ಹೆಚ್ಚು ಸ್ವಾತಂತ್ರಕ್ಕಾಗಿ ಹೋರಾಡಿದ ಮಹನೀಯರ ಬಗ್ಗೆ ತಿಳಿಯಬೇಕು ಅವರ ಪುಸ್ತಕಗಳನ್ನು ಖರಿದಿಸಿ ಓದಬೇಕು, ಚಿಕ್ಕ ವಯಸ್ಸಿನಲ್ಲೆ ನಾವು ದೇಶಾಭಿಮಾನ ಹೆಚ್ಚಿಸುವಂತಹ ಕೆಲಸ ಶಾಲೆಗಳಲ್ಲಿ ಆಗಬೇಕಿದೆ ಇದಕ್ಕೆ ನಮಗೆ ಇಸ್ರೇಲ್ ದೇಶವನ್ನು ಮಾದರಿಯಾಗಿ ತೆಗೆದುಕೊಳ್ಳಬೇಕು ಎಂದು ತಿಳಿಸಿದರು,

ವೀರ ಸಾವರ್ಕರ್ ಯುವ ಬಳಗದ ಸಂದೇಶ್ ಪವಾರ್, ಮಹೇಶ್ ರಾಜೇ ಅರಸ್, ವಿಕ್ರಂ ಅಯ್ಯಂಗಾರ್, ಮನೋಜ್, ಪ್ರಮೋದ್ ಗೌಡ, ಅಭಿಷೇಕ್ ಗೌಡ,ರವಿ, ಕಾರ್ತಿಕ್ ಸಿದ್ದೇಗೌಡ, ಚಂದನ್ ಗೌಡ, ರಂಗರಾಜು ಬಳಗದ ಮತ್ತಿತ್ತರು ಭಾಗವಹಿಸಿದ್ದರು.


Share this with Friends

Related Post