Mon. Dec 23rd, 2024

ಪಾಕಿಸ್ತಾನಿ ಡ್ರೋನ್ ಹೊಡೆದುರುಳಿಸಿದಭದ್ರತಾ ಪಡೆ

Share this with Friends

ಪೊಂಚ್,ಮೇ.29: ಜಮ್ಮು ಮತ್ತು ಕಾಶ್ಮೀರದ ಪೂಂಚ್‌ ಗಡಿ ನಿಯಂತ್ರಣ ರೇಖೆ ಬಳಿ ಗಡಿ ಭದ್ರತಾ ಪಡೆ ಸಿಬ್ಬಂದಿ ಹಲವು ಸುತ್ತು ಗುಂಡು ಹಾರಿಸಿ ಶಂಕಿತ ಪಾಕಿಸ್ತಾನಿ ಡ್ರೋನ್ ಹೊಡೆದುರುಳಿಸಿದ್ದಾರೆ.

ಮಂಗಳವಾರ ರಾತ್ರಿ 11.30 ರ ಸುಮಾರಿಗೆ ಖಾನೇತಾರ್ ಗ್ಯಾರಿಸನ್‌ನಲ್ಲಿ ಗಡಿಯಾಚೆಯಿಂದ ಡ್ರೋಣ್ ಚಟುವಟಿಕೆ ಗಮನಿಸಿದ ಭದ್ರತಾ ಪಡೆ, ನಂತರ ಕಾರ್ಯಪ್ರವೃತ್ತರಾಗಿದ್ದಾರೆ, ಮೂರು ಡಜನ್ ಸುತ್ತು ಗುಂಡು ಹಾರಿಸುವ ಮೂಲಕ ಡ್ರೋನ್ ಹೊಡೆದುರುಳಿಸಲಾಗಿದೆ. ಇಡೀ ಪ್ರದೇಶದ ಮೇಲೆ ನಿಗಾ ವಹಿಸಲಾಗಿದ್ದು, ಇಂದು ಬೆಳಿಗ್ಗೆ ಬೃಹತ್ ಶೋಧ ಕಾರ್ಯಾಚರಣೆ ಪ್ರಾರಂಭಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಪೊಲೀಸರು ಶಸ್ತ್ರಾಸ್ತ್ರಗಳು ಮತ್ತು ಮಾದಕವಸ್ತು ಸಾಗಟ ನಿಯಂತ್ರಣ ಉದ್ದೇಶದಿಂದ ಗಡಿಯಾಚೆಯಿಂದ ಹಾರಿಸಲಾದ ಡ್ರೋನ್‌ ಬಗ್ಗೆ ತಿಳಿಸುವವರಿಗೆ 3 ಲಕ್ಷ ರೂಪಾಯಿ ನಗದು ಬಹುಮಾನವನ್ನು ಘೋಷಿಸಿದ್ದರು.


Share this with Friends

Related Post