ಮೈಸೂರು, ಮೇ.29: ಭಾರತಕ್ಕೆ ಸತ್ಯಾಗ್ರಹ, ಅಹಿಂಸಾ ಮಾರ್ಗದಿಂದಷ್ಟೇ ಸ್ವಾತಂತ್ರ್ಯ ದೊರಕಲಿಲ್ಲ,ಸಾಕಷ್ಟು ಕ್ರಾಂತಿಕಾರಿಗಳು ರಕ್ತ ಚೆಲ್ಲಿ,ಪ್ರಾಣ ಬಲಿದಾನ ಮಾಡಿ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ ಎಂದು ನಿವೃತ್ತ ಎ ಎಸ್ ಐ ರಂಗನಾಥ್ ಹೇಳಿದರು.
ಮೈಸೂರಿನ ರೂಪ ನಗರದಲ್ಲಿ ಜನಸೇವಕ ಯುವ ಬ್ರಿಗೇಡ್ ವತಿಯಿಂದ ಏರ್ಪಡಿಸಿದ್ದ
ವಿನಾಯಕ ದಾಮೋದರ್ ಸಾವರ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಖಡ್ಗ ಹಿಡಿಯದೇ ಸ್ವಾತಂತ್ರ್ಯ ಬರಲಿಲ್ಲ, ಸಾಕಷ್ಟು ಸಂಘರ್ಷಗಳು ನಡೆದವು, ಸಾವರ್ಕರ್ ಬಾಲ್ಯದಿಂದ ದೇಶದ ಬಗ್ಗೆ ಅಪಾರ ಪ್ರೀತಿ ಇರಿಸಿಕೊಂಡಿದ್ದರು,ಹೀಗಾಗಿ, ಅವರಲ್ಲಿ ಕ್ರಾಂತಿಕಾರಿ ಮನೋಭಾವ ಬೆಳೆಯಿತು ಎಂದು ಹೇಳಿದರು.
ಅಭಿನವ ಭಾರತ ಕಟ್ಟುವ ಮೂಲಕ ದೇಶದ ಯುವಕರಲ್ಲಿ ಸಾವರ್ಕರ್ ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದರು, ದೇಶಕ್ಕಾಗಿ ಸೇವೆ ಸಲ್ಲಿಸುವಂತೆ ಯುವಕರಲ್ಲಿ ಪ್ರೇರೇಪಣೆ ಮಾಡಿದರು. ಅವರ ಮಾತುಗಳು ಯುವಕರ ಮೇಲೆ ಭಾರಿ ಪ್ರಭಾವ ಬೀರಿ, ದೇಶ ಸೇವೆಗೆ ಮುಂದಾದರು, ಯಾವುದೇ ರೀತಿಯ ತ್ಯಾಗಕ್ಕೂ ಸಿದ್ಧರಾಗಿದ್ದರು ಎಂದು ರಂಗನಾಥ್ ತಿಳಿಸಿದರು.
ಜನಸೇವಕ ಯುವ ಬ್ರಿಗೇಡ್ ಅಧ್ಯಕ್ಷ ರಾಘವೇಂದ್ರ ಡಿ, ಭಾಸ್ಕರ್ ,ಮಲ್ಲೇಶ್, ಮಂಜು, ಶ್ರೀನಿವಾಸ್, ಯೋಗ ಮಾಸ್ಟರ್ ನಾಗರಾಜ್, ಮಾಯಾ ಶಾನಭಾಗ್, ಯೋಗ ನರಸಿಂಹ ಮತ್ತಿತರರು ಹಾಜರಿದ್ದರು.