Mon. Dec 23rd, 2024

ಸಬ್ ಇನ್ಸ್ ಪೆಕ್ಟರ್ ಲೋಕಾಯುಕ್ತ ಬಲೆಗೆ

Share this with Friends

ಮೈಸೂರು, ಮೇ.30: ಲಂಚ ಸ್ವೀಕರಿಸುತ್ತಿದ್ದ‌‌ ಸಬ್ ಇನ್ಸ್ ಪೆಕ್ಟರ್ ಲೋಕಾಯುಕ್ತ ಬಲೆಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಮೈಸೂರಿನ ಕುವೆಂಪು ನಗರ ಠಾಣೆ ಸಬ್ ಇನ್ಸ್ ಪೆಕ್ಟರ್ ರಾಧಾ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ.

ಕ್ರಿಮಿನಲ್ ಕೇಸ್ ಒಂದರ ಸಂಬಂಧ ಕುವೆಂಪುನಗರದ ವ್ಯಕ್ತಿಯಿಂದ 25000 ರೂ ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ,ರಾಧಾ ಅವರನ್ನು ಬಂಧಿಸಿದ್ದಾರೆ.

ಕ್ರಿಮಿನಲ್ ಕೇಸ್ ಸಂಬಂಧ ಐವತ್ತು ಸಾವಿರ ನೀಡುವಂತೆ ರಾಧಾ ವ್ಯಕ್ತಿ ಒಬ್ಬರಿಗೆ ಒತ್ತಾಯಿಸಿದ್ದರು, ಈ ಬಗ್ಗೆ ಆ ವ್ಯಕ್ತಿ ಲೋಕಾಯುಕ್ತರಿಗೆ ದೂರು ನೀಡಿದ್ದರು.

ಹಾಗಾಗಿ ಗುರುವಾರ 25000 ರೂ ನೀಡುವಾಗಲೇ ಮೈಸೂರು ಲೋಕಾಯುಕ್ತ ಎಸ್ ಪಿ ಮೋಹನ್ ಕುಮಾರ್ ನೇತೃತ್ವದಲ್ಲಿ‌ ಮೈಸೂರು ಚಾಮರಾಜನಗರ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ರಾಧಾ ಅವರನ್ನು ಬಂಧಿಸಿದ್ದಾರೆ.


Share this with Friends

Related Post