Fri. Nov 1st, 2024

ರಾಷ್ಟ್ರಗೀತೆಗೆ ತಮಿಳುನಾಡು ಸರ್ಕಾರ ವಿರೋಧ, ಭಾಷಣ ತಿರಸ್ಕರಿಸಿ ಹೊರನಡೆದ ರಾಜ್ಯಪಾಲರು

Tamil Nadu Governor
Share this with Friends

ಚನ್ನೈ. ಫೆ.12 : ರಾಷ್ಟ್ರಗೀತೆಗೆ ಗೌರವ ಕೊಡದ ಕಾರಣ ನನಗೆ ಭಾಷಣ ಮಾಡಲು ಸಾಧ್ಯವಿಲ್ಲ ಎಂದು ಹೇಳಿ ತಮಿಳುನಾಡು ವಿಧಾನಸಭೆಯಿಂದ ರಾಜ್ಯಪಾಲ ಆರ್​ ಎನ್​ ರವಿ ಹೊರನಡೆದಿದ ಪ್ರಸಂಗ ನಡೆದಿದೆ. ಸದನ ಆರಂಭ ಹಾಗೂ ಕೊನೆಯಲ್ಲಿ ರಾಷ್ಟ್ರಗೀತೆ ಹಾಡುವಂತೆ ಎನ್​ ರವಿ ಸಲಹೆ ನೀಡಿದ್ದರು. ಆದರೆ ಸ್ಟಾಲಿನ್ ಸರ್ಕಾರವು ಅದನ್ನು ನಿರಾಕರಿಸಿದೆ. ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಅವರು ಸದನದಿಂದ ಹೊರ ನಡೆದಿದ್ದಾರೆ. ಸದನ ಆರಂಭವಾಗುವ ಮುನ್ನ ಹಾಗೂ ಕೊನೆಯಲ್ಲಿ ರಾಷ್ಟ್ರಗೀತೆ ಹಾಡಬೇಕೆಂದು ಸಲಹೆ ನೀಡಿದ್ದೆ ಆದರೆ ಅವರು ನಿರ್ಲಕ್ಷಿಸಿದ್ದಾರೆ ಎಂದು ಹೇಳಿ ಸದನದಿಂದ ಹೊರನಡೆದಿದ್ದಾರೆ.

ಅಧಿವೇಶನಕ್ಕೂ ಮುನ್ನ ರಾಷ್ಟ್ರಗೀತೆಗೆ ತಮಿಳುನಾಡು ಸರ್ಕಾರ ವಿರೋಧ, ಭಾಷಣ ತಿರಸ್ಕರಿಸಿ ಹೊರ ನಡೆದ ರಾಜ್ಯಪಾಲ ರವಿ ವಿಧಾನಸಭೆಯಲ್ಲಿ ಸರ್ಕಾರ ನೀಡಿದ ಭಾಷಣದ ಪ್ರತಿಯನ್ನು ಓದಲು ನಿರಾಕರಿಸಿದ ಆರ್​ಎನ್​ ರವಿ ವಿಧಾನಸಭೆಯಿಂದ ಹೊರಹೋಗಿದ್ದಾರೆ.

ತಮಿಳುನಾಡು ಸರ್ಕಾರ ತಮಗಾಗಿ ಸಿದ್ಧಪಡಿಸಿರುವ ಭಾಷಣದಲ್ಲಿ ಮಾಡಿರುವ ಕೆಲವು ಟೀಕೆಗಳನ್ನು ಒಪ್ಪುವುದಿಲ್ಲ ಎಂದು ಹೇಳುತ್ತಾ ಭಾಷಣ ಮುಗಿಸಿದರು. ಕೆಲವೇ ನಿಮಿಷಗಳಲ್ಲಿ ರಾಜ್ಯಪಾಲರು ಭಾಷಣ ಮುಗಿಸಿದ್ದಾರೆ.

ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ‌ ಭಾಷಣ:ಗ್ಯಾರಂಟಿ ಯೋಜನೆಗಳಿಗೆ ಮೆಚ್ಚುಗೆ

ಎಐಎಡಿಎಂಕೆ ನಾಯಕ ಎಡಪ್ಪಾಡಿ ಕೆ ಪಳನಿಸ್ವಾಮಿ ಮಾತನಾಡಿ, ತಮಿಳುನಾಡು ವಿಧಾನಸಭೆಯ ಅಧಿವೇಶನದ ಆರಂಭ ಹಾಗೂ ಕೊನೆಯಲ್ಲಿ ರಾಷ್ಟ್ರಗೀತೆಯನ್ನು ಹಾಡುವಂತೆ ರಾಜ್ಯಪಾಲರು ವಿನಂತಿಸಿದ್ದರು. ಅವರ ಸಲಹೆಯನ್ನು ನಿರ್ಲಕ್ಷಿಸಿದ ಕಾರಣ ಅವರು ಸಾಂಪ್ರದಾಯಿಕ ಭಾಷಣ ಮಾಡಲು ನಿರಾಕರಿಸಿದ್ದಾರೆ. ಇದು ರಾಜ್ಯಪಾಲರು ಹಾಗೂ ಸರ್ಕಾರದ ನಡುವಿನ ಸಮಸ್ಯೆಯಾಗಿದೆ ಎಂದಿದ್ದಾರೆ.


Share this with Friends

Related Post