Mon. Dec 23rd, 2024

ಶಶಿ ತರೂರ್ ಮಾಜಿ ಆಪ್ತ ಸಹಾಯಕ ಅರೆಸ್ಟ್

Share this with Friends

ನವದೆಹಲಿ,ಮೇ.30: ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಶಶಿ ತರೂರ್ ಮಾಜಿ ಆಪ್ತ ಸಹಾಯಕ ಸೇರಿದಂತೆ ಇಬ್ಬರನ್ನು ದೆಹಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

ತರೂರ್‌ ಮಾಜಿ ಪಿಎ ಶಿವಕುಮಾರ್ ಪ್ರಸಾದ್ ಅವರು ದುಬೈನಿಂದ ವ್ಯಕ್ತಿಯೊಬ್ಬರನ್ನು ಬರಮಾಡಿಕೊಳ್ಳಲು ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿದ್ದರು‌.

ಪ್ರಯಾಣಿಕರು ಸುಮಾರು 500 ಗ್ರಾಂ ಚಿನ್ನವನ್ನು ಪ್ರಸಾದ್ ಅವರಿಗೆ ನೀಡಲು ಪ್ರಯತ್ನಿಸಿದಾಗ ಇಬ್ಬರನ್ನೂ ಬಂಧಿಸಿದ್ದಾರೆ.

ಪ್ರಕರಣದ ವಿಚಾರಣೆ ನಡೆಯುತ್ತಿದೆ, ಪ್ರಸಾದ್ ಅವರು ಏರೋಡ್ರಮ್ ಎಂಟ್ರಿ ಪರ್ಮಿಟ್ ಕಾರ್ಡ್ ಹೊಂದಿದ್ದು, ಅವರು ವಿಮಾನ ನಿಲ್ದಾಣದ ಆವರಣವನ್ನು ಪ್ರವೇಶಿಸಿದ್ದರು.
ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಶಶಿ ತರೂರ್ ಅವರ ಸಹಾಯಕನ ಬಂಧನಕ್ಕೆ ಸಂಬಂಧಿಸಿದಂತೆ ಆಡಳಿತಾರೂಢ ಬಿಜೆಪಿ ವಿರುದ್ಧ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಟೀಕಾಪ್ರಹಾರ ನಡೆಸಿವೆ.


Share this with Friends

Related Post