Mon. Dec 23rd, 2024

ಅಂಬರೀಶ್ 72ನೇ ವರ್ಷದ ಜನುಮದಿನ ಆಚರಣೆ

Share this with Friends

ಮೈಸೂರು, ಮೇ.30: ರೆಬೆಲ್ ಸ್ಟಾರ್ ಅಂಬರೀಷ್ 72ನೇ ಹುಟ್ಟುಹಬ್ಬವನ್ನು ನಗರದಲ್ಲಿ ವಿಶೇಷವಾಗಿ ಆಚರಿಸಲಾಯಿತು.

ಮೈಸೂರಿನ ಲಕ್ಷ್ಮಿಪುರಂನಲ್ಲಿ ಚಾಮುಂಡೇಶ್ವರಿ ಸ್ನೇಹ ಬಳಗ ಹಾಗೂ ರೆಬೆಲ್ ಸ್ಟಾರ್ ಅಂಬರೀಶ್ ಅಭಿಮಾನಿ ಬಳಗದ ವತಿಯಿಂದ ಅಂಬಿ ಜನ್ಮದಿನ ಆಚರಿಸಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್, ಅಂಬರೀಷ್ ಅಜಾತಶತ್ರು, ರಾಜಕೀಯ ಹಾಗೂ ಸಿನಿಮಾ ರಂಗದಲ್ಲಿ ಯಾರಿಗೂ ಸಾಟಿಯಾಗದ, ಅಪಾರ ಗೆಳೆಯ ಬಳಗವನ್ನು ಅವರು ಹೊಂದಿದ್ದಾರೆ.

ಸಿನಿಮಾದವರ ಪಾಲಿಗಂತೂ ಅವರು ದೇವರ ಸ್ವರೂಪ. ಏಕೆಂದರೆ ಛಲ ಬಿಡದೆ ಕಟ್ಟಿದ ಕಲಾವಿದರ ಸಂಘದ ಭವನ ಹಾಗೂ ಇತರ ವಿಷಯಗಳು ಈಗಿನ ಕಲಾವಿದರಿಗೆ ಆಸರೆಯಾಗಿವೆ ಎಂದು ಹೇಳಿದರು.

ಮಾಜಿ ಮಹಾಪೌರರಾದ ಮೂದಾಮುನಿ, ಮಂಚೆ ಗೌಡನಕೊಪ್ಪಲು ರವಿ, ವರುಣ ಮಹಾದೇವ್, ಪ್ರಕಾಶ್ ಪ್ರಿಯದರ್ಶನ್, ರವಿಚಂದ್ರ, ಬೈರತಿ ಲಿಂಗರಾಜು,
ಕೇಬಲ್ ನಾಗರಾಜ್, ಮಹಾದೇವ್ ಪಾಂಡೆ, ಮಹದೇವ್, ರಾಘವೇಂದ್ರ, ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.


Share this with Friends

Related Post