ಶಿವಮೊಗ್ಗ,ಮೇ.30: ಪ್ರಜ್ವಲ್ ನಾಡಿಗೆ ಆಗಮಿಸಿ ಎಸ್ಐಟಿ ಮುಂದೆ ವಿಚಾರಣೆಗೆ ಹಾಜರಾಗಬೇಕಿದೆ,ಒಂದು ವೇಳೆ ಬಾರದೆ ಹೋದರೆ ಇಂಟರ್ ಪೋಲ್ ಮೂಲಕ ಅವರನ್ನು ಬಂಧಿಸಬೇಕಾಗುತ್ತದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದರು.
ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಪ್ರಜ್ವಲ್ ರೇವಣ್ಣ ಮೇ.31ಕ್ಕೆ ಎಸ್ಐಟಿ ಮುಂದೆ ಬರುವುದಾಗಿ ವಿಡಿಯೋ ಮೂಲಕ ತಿಳಿಸಿದ್ದಾರೆ,ನಾವು ಬ್ಲೂ ಕಾರ್ನರ್ ನೋಟಿಸ್ ಕೊಟ್ಟಿದ್ದೇವೆ,ಹಾಗಾಗಿ ಬೇರೆ ಮಾರ್ಗವಿಲ್ಲದೆ ಬರುವುದು ಅನಿವಾರ್ಯ ಎಂದು ಹೇಳಿದರು.
ಒಂದು ವೇಳೆ ಪ್ರಜ್ವಲ್ ಬರದೇ ಇದ್ದರೆ ಎಂಬ ಮಾಧ್ಯಮದವರ ಪ್ರಶ್ನೆಗೆ ನೋಡೋಣ,ಹೊರದೇಶದಲ್ಲಿರುವ ಆರೋಪಗಳನ್ನು ಸುಖಾಸುಮ್ಮನೆ ಬಂಧಿಸಲಾಗದು,ಅಂತಹ ಪರಿಸ್ಥಿತಿ ಎದುರಾದರೆ ಸಿಬಿಐ ಮೂಲಕ ಇಂಟರ್ ಪೋಲ್ ಸಂಪರ್ಕಿಸಿ ಕರೆತರಬೇಕಾಗುತ್ತದೆ ಎಂದು ಪರಮೇಶ್ವರ್ ಉತ್ತರಿಸಿದರು.