Mon. Dec 23rd, 2024

ತಲೆ ಕೆಟ್ಟಿದ್ದರೆ ಹುಚ್ಚಾಸ್ಪತ್ರೆಗೆ ಸೇರಿಸಿ;ಪತ್ರಕರ್ತ ಲಕ್ಷ್ಮಣ ಕೋಳಿ

Share this with Friends

ಅಥಣಿ : ಶಾಸಕರ ಸಮ್ಮುಖದಲ್ಲೆ ಮಾಧ್ಯಮದರಿಗೆ ಮನೆಗೆ ನುಗ್ಗಿ ಕೈ ಕಾಲು ಮುರಿಯೋ ಧಮಕಿ ಹಾಕಿದ ಕಾಂಗ್ರೆಸ್ ಕಾರ್ಯಕರ್ತ ಸಂತೋಷ ವಿರುದ್ದ ಸೂಕ್ತ ಕಾನೂನು ಕ್ರಮಕ್ಕೆ ಪತ್ರಕರ್ತ ಲಕ್ಷ್ಮಣ ಕೋಳಿ ಪೊಲೀಸ್ ಇಲಾಖೆಗೆ ಒತ್ತಾಯಿಸಿದ್ದಾರೆ.

ಈ ಕುರಿತು ಕಾಗವಾಡ ಶಾಸಕ ರಾಜು ಕಾಗೆ ಪ್ರತಿಕ್ರಿಯೆ ನೀಡಿದ್ದು ಆತ ಮಾನಸಿಕ ಅಸ್ವಸ್ಥ ಆತನ ತಲೆ ಕೆಟ್ಟಿದೆ ಆತನಿಗೂ ನನಗೂ ಸಂಭಂದ ಇಲ್ಲ ಎಂಬ ಹೇಳಿಕೆ ನೀಡಿದ್ದಾರೆ. ಈ ಕುರಿತು ಅಥಣಿ ತಾಲೂಕು ಪತ್ರಕರ್ತ ಸಂಘದ ಕಾರ್ಯದರ್ಶಿ ಲಕ್ಷ್ಮಣ ಕೋಳಿ ಮಾತನಾಡಿ ಆತನ ತಲೆ ಕೆಟ್ಟಿದ್ದಾರೆ ಕೂಡಲೇ ಆತನನ್ನ ಹುಚ್ಚಸ್ಪತ್ರೆಗೆ ಸೇರಿಸಿ ಇಲ್ಲವಾದಲ್ಲಿ ಸ್ಥಳೀಯ ಪೊಲೀಸರು ಸ್ವಯಂ ಪ್ರೇರಿತವಾಗಿ ಆತನ ವಿರುದ್ಧ ದೂರು ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.


Share this with Friends

Related Post