Fri. Mar 6th, 2026

ಭವಾನಿ ರೇವಣ್ಣ ಸಿಕ್ಕಿದ ತಕ್ಷಣ ಬಂಧನ:ಪರಮೇಶ್ವರ್

Share this with Friends

ಬೆಂಗಳೂರು,ಜೂ.2: ಭವಾನಿ ರೇವಣ್ಣ ಅವರನ್ನು ಪೊಲೀಸರು ಅರೆಸ್ಟ್ ಮಾಡಲು ಹುಡುಕುತ್ತಿದ್ದು ಸಿಕ್ಕಿದ ತಕ್ಷಣ ಬಂಧನವಾಗಲಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭವಾನಿ ರೇವಣ್ಣ ಎಲ್ಲಿದ್ದಾರೋ ಗೊತ್ತಾಗಿಲ್ಲ, ಅವರನ್ನು ಪೊಲೀಸರು ಹುಡುಕಿ, ಬಂಧಿಸಲಿದ್ದಾರೆ ಎಲ್ಲಾ ಕಾನೂನು ಪ್ರಕಾರ ನಡೆಯುತ್ತದೆ,ಇದೇನು ಸವಾಲಿನ ಪ್ರಶ್ನೆ ಅಲ್ಲ ಎಂದು ತಿಳಿಸಿದರು.

ಜೂ.3 ಪರಿಷತ್ ಚುನಾವಣೆ ನಾಮಿನೇಷನ್‍ಗೆ ಕೊನೆಯ ದಿನ, ಹಾಗಾಗಿ ಕಾಂಗ್ರೆಸ್ ಪಕ್ಷದ ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಲಾಗಿದೆ, ನಾಮಿನೇಷನ್ ಪೇಪರ್‌ಗೆ 10 ಜನ ಸಹಿ ಮಾಡಬೇಕು ಆ ಕಾರಣಕ್ಕೆ ಸಭೆ ಕರೆದಿದ್ದಾರೆ ಎಂದು ಪರಮೇಶ್ವರ್ ಹೇಳಿದರು.


Share this with Friends

Related Post