Mon. Dec 23rd, 2024

ನಾಲ್ವಡಿಯವರು ಅಪರೂಪದ ಮಹಾರಾಜರು:ಪ್ರಕಾಶ್ ಪ್ರಿಯದರ್ಶನ್

Share this with Friends

ಮೈಸೂರು, ಜೂ.3: ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಅಪರೂಪದ ಮಹಾರಾಜರು ಎಂದು ಜೆಡಿಎಸ್ ನಗರ ಕಾರ್ಯದರ್ಶಿ ಎಸ್. ಪ್ರಕಾಶ್ ಪ್ರಿಯದರ್ಶನ್
ಬಣ್ಣಿಸಿದರು.

ಕುವೆಂಪು ನಗರದಲ್ಲಿರುವ ಬೆಳಕು ವಾತ್ಸಲ್ಯ ದಾಮದಲ್ಲಿ ಎಸ್.ಪ್ರಕಾಶ್ ಪ್ರಿಯದರ್ಶನ್ ಸ್ನೇಹ ಬಳಗ ವತಿಯಿಂದ
ನಾಲ್ವಡಿ ಕೃಷ್ಣರಾಜ ಒಡೆಯರ 140ನೇ ಜಯಂತಿ ಆಚರಿಸಿ,ಮಹಾರಾಜರ‌ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಹಿರಿಯ ನಾಗರೀಕರಿಗೆ ಹಣ್ಣು‌ ವಿತರಿಸಿ ಅವರು ಮಾತನಾಡಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಇಡೀ ಜಗತ್ತೇ ಮೈಸೂರು ಕಡೆ ಮುಖ ಮಾಡುವಂತೆ ಮಾಡಿದ ಮಹಾರಾಜರು,ನಾಡಿನ ಸಮಗ್ರ ಅಭಿವೃದ್ಧಿಯ ಬಗ್ಗೆ ಯೋಚಿಸಿದ ಮಹಾನ್ ವ್ಯಕ್ತಿ, ಶಿಕ್ಷಣ ,ನೀರಾವರಿ, ವಿಜ್ಞಾನ, ಕೈಗಾರಿಕೆ ,ಮಹಿಳಾ ಶಿಕ್ಷಣ, ಹಿಂದುಳಿದ ಹಾಗೂ ಬಡ ಜನರ ಬಗ್ಗೆ ಸಂವೇದನಾಶೀಲರಾಗಿ ಚಿಂತಿಸಿ ಪ್ರಗತಿಪರ ನಿರ್ಧಾರಗಳನ್ನು ಕೈಕೊಂಡು ಇತಿಹಾಸದಲ್ಲಿ ಮರೆಯಲಾಗದ ಮಹಾರಾಜರಾಗಿದ್ದಾರೆ ಎಂದು ಪ್ರಕಾಶ್ ಪ್ರಿಯದರ್ಶನ್

ಎಸ್ ಪ್ರಕಾಶ್ ಪ್ರಿಯದರ್ಶನ್ ಸ್ನೇಹ ಬಳಗವು 180 ನೇ ವಾರ ನಗರದ ವಿವಿಧ ಮೊಹಲ್ಲಾ ದಲ್ಲಿರುವ ವೃದ್ಧಾಶ್ರಮ ಹಾಗೂ ಬಡ ವಸತಿ ಶಾಲೆ, ವಿಶೇಷ ಮಕ್ಕಳ ಶಾಲೆ, ಸೇರಿದಂತೆ ಇನ್ನಿತರ ಅಸಹಾಯಕರಿಗೆ ಹಣ್ಣು ಹಂಪಲು ವಿತರಿಸುತ್ತಾ ಬಂದಿರುವುದು ಶ್ಲಾಘನೀಯ ಕಾರ್ಯ ಎಂದು ಬಿಜೆಪಿ ಮುಖಂಡ ರಾಜೇಶ್ ಜಾದವ್ ಇದೇ ವೇಳೆ ಹರ್ಷ ವ್ಯಕ್ತಪಡಿಸಿದರು.

ಈ ವೇಳೆ ಹೇಮಂತ್, ಪತ್ರಕರ್ತರ ವಿತರಕರ ಸಂಘದ ಅಧ್ಯಕ್ಷರಾದ ಹೂ ಮಹದೇವ್, ಸುಬ್ರಮಣಿ, ಮಹದೇವ್, ಮಹೇಶ್, ಹರ್ಷಿತ್ ಮತ್ತಿತರರು ಹಾಜರಿದ್ದರು.


Share this with Friends

Related Post