Mon. Dec 23rd, 2024

ಮೈಸೂರಿನಲ್ಲೂ ಭಾರತ್ ಅಕ್ಕಿ ವಿತರಣೆ

Share this with Friends

ಮೈಸೂರು, ಫೆ.12: ಸಾರ್ವಜನಿಕರಿಗೆ ತೊಂದರೆಯಾಗದಂತೆ ಪ್ರಧಾನಿಯವರು ಬಿಡುಗಡೆ ಮಾಡಿರುವ ಭಾರತ್ ಅಕ್ಕಿಯನ್ನು ಮೈಸೂರಲ್ಲೂ ವಿತರಿಸಲಾಗುತ್ತಿದೆ.

ಇಂದು ಮೈಸೂರಿನ ಚಾಮುಂಡಿಪುರಂ ವೃತ್ತದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರ ಯೋಜನೆಯದ ಭಾರತ್ ಅಕ್ಕಿಯನ್ನು ಸಾರ್ವಜನಿಕರಿಗೆ ನೀಡುವ ಮೂಲಕ ಉದ್ಘಾಟಿಸಲಾಯಿತು.

ಮಾಜಿ ಸಚಿವ ಎಸ್.ಎ ರಾಮದಾಸ್ ಸಾರ್ವಜನಿಕರಿಗೆ ಅಕ್ಕಿ‌‌ ವಿತರಿಸುವ ಮೂಲಕ ಉದ್ಘಾಟಿಸಿದರು.

ಈ ಯೋಜನೆಯಲ್ಲಿ ಮೊದಲ ಹಂತದಲ್ಲಿ
ಒಬ್ಬ ವ್ಯಕ್ತಿಗೆ 20 ಕೆಜಿ ಅಕ್ಕಿ ತೆಗೆದುಕೊಳ್ಳಲು ಅವಕಾಶವಿದೆ.

ಈ‌ ವೇಳೆ ‌ರಾಮದಾಸ್ ಮಾತನಾಡಿ,ಪ್ರಧಾನಿ ಮೋದೀಜಿಯವರ ಅತ್ಯುತ್ತಮ ಯೋಜನೆ ಇದು. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.

ಈ ಯೋಜನೆ ಅಡಿಯಲ್ಲಿ ಗೋಧಿ ಮತ್ತು ಕಡಲೆ ಬೆಳೆಗಳನ್ನು ಕೂಡ ಕೊಡಲಾಗುತ್ತದೆ ಎಂದು ತಿಳಿಸಿದರು.


Share this with Friends

Related Post