ಮೈಸೂರು,ಜೂ.5: ಸಸ್ಯಗಳನ್ನು ಬೆಳೆಸುವ ಮೂಲಕ ಉತ್ತಮ ವಾತಾವರಣ ನಿರ್ಮಾಣ ಮಾಡುವ ಗುರಿಯನ್ನು ಹೊಂದಬೇಕು ಎಂದು ಪರಿಸರ ಪ್ರೇಮಿ ಸುಬ್ರಹ್ಮಣ್ಯ ಎಚ್ ಆರ್ ಯುವಜನತೆಗೆ ಕರೆ ನೀಡಿದರು.
ನಗರದ ಮರಟಿ ಕ್ಯಾತ್ನಳ್ಳಿಯ ವಿಸ್ತರ ಲೇಔಟ್ ನಲ್ಲಿ ಜನಸೇವಕ ಯುವ ಬ್ರಿಗೇಡ್ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪರಿಸರ ಉಳಿಸದಿದ್ದರೆ ಸರ್ವನಾಶವಾಗಿ ಬಿಡುತ್ತದೆ,ಮನುಷ್ಯ ಪರಿಸರವನ್ನು ಉಳಿಸಲು ಮುಂದಾಗದಿದ್ದರೆ ಮುಂದೊಂದು ದಿನ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.
ದಿನೇ ದಿನೇ ವ್ಯಾಪಕವಾಗಿ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದ್ದು,ಇದು ಸಮಾಜವನ್ನು ಕಟುವಾಗಿ ಕಾಡುತ್ತಿರುವ ಸಮಸ್ಯೆಯಾಗಿದೆ,ಇದಕ್ಕೆ ಪರಿಹಾರ ಕಂಡು ಕೊಳ್ಳದಿದ್ದರೆ ಮಾನವ ಕುಲ ನಾಶವಾಗುವುದರಲ್ಲಿ ಸಂಶಯವಿಲ್ಲ ಎಂದು
ಸುಬ್ರಹ್ಮಣ್ಯ ತಿಳಿಸಿದರು.
ಈ ವೇಳೆ 30ಕ್ಕೂ ಹೆಚ್ಚು ವಿವಿಧ ಜಾತಿಯ ಗಿಡಗಳನ್ನು ನೆಟ್ಟು ನೀರು ಹಾಕಲಾಯಿತು.
ಜನಸೇವಕ ಯುವ ಬ್ರಿಗೇಡ್ ಅಧ್ಯಕ್ಷ ರಾಘವೇಂದ್ರ ಡಿ, ಬಿಜೆಪಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ನಂಜುಂಡಸ್ವಾಮಿ, ಲೇಔಟ್ ನ ಅಧ್ಯಕ್ಷ ರಾಜು, ಕಾರ್ಯದರ್ಶಿ ಸಿದ್ದೇಗೌಡ, ಉಪಾಧ್ಯಕ್ಷ ವೀರೇಶ್, ಸಂಗಮೇಶ್, ಆನಂದ್, ನರೇಂದ್ರ, ಚಂದ್ರಶೇಖರ್, ಕೈಲಾಸ್ ಮತ್ತಿತರರು ಭಾಗವಹಿಸಿದ್ದರು.