Fri. Jan 10th, 2025

ಮೈಸೂರಿನ ಸುದೀಕ್ಷ ರಾಜ್ಯಕ್ಕೆ ಎರಡನೇ ಟಾಪರ್

Share this with Friends

ಮೈಸೂರು,ಜೂ.6: ಈ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶ, ಮರು ಮೌಲ್ಯಮಾಪನದಲ್ಲಿ ಮೈಸೂರಿನ ಸುದೀಕ್ಷ ಎಂ. ಡಿ ರಾಜ್ಯಕ್ಕೆ ಎರಡನೇ ಟಾಪರ್ ಆಗಿ ಹೊರಹೊಮ್ಮಿದ್ದಾರೆ.

ಮೈಸೂರಿನ ವಿಜಯ ವಿಠ್ಠಲ ವಿದ್ಯಾಸಂಸ್ಥೆ ವಿದ್ಯಾರ್ಥಿನಿ ಸುದೀಕ್ಷ ಎಂ. ಡಿ ಗೆ ಮೌಲ್ಯಮಾಪಕರ ಎಡವಟ್ಟಿನಿಂದ ಮೊದಲ ಫಲಿತಾಂಶದಲ್ಲಿ 625ಕ್ಕೆ 620 ಅಂಕ ಬಂದಿತ್ತು.

ಈಕೆ ಕನ್ನಡ ಸೇರಿ 5 ವಿಷಯದಲ್ಲಿ ಶೇ 100ರಷ್ಟು ಅಂಕ ಗಳಿಸಿದ್ದರು. ಸಂಸ್ಕೃತ 125 ಇಂಗ್ಲಿಷ್ 100 ಕನ್ನಡ 100 ವಿಜ್ಞಾನ 100 ಸಮಾಜ 100 ಗಣಿತದಲ್ಲಿ 95 ಅಂಕ ಬಂದಿತ್ತು.

ನಂತರ ಸುದೀಕ್ಷಾ ಮರುಮೌಲ್ಯದ ಮೊರೆ ಹೋಗಿದ್ದರು, ಮರು ಮೌಲ್ಯ ಮಾಪನದ ಫಲಿತಾಂಶ ಪ್ರಕಟವಾಗಿದ್ದು, ಮರು ಮೌಲ್ಯ ಮಾಪನದಲ್ಲಿ ಗಣಿತದಲ್ಲಿ 99 ಅಂಕ ಬಂದಿದೆ,ಹಾಗಾಗಿ 625ಕ್ಕೆ 624 ಅಂಕ ಲಭಿಸಿದೆ.

ಆದ್ದರಿಂದ ಸುಧೀಕ್ಷ ಮೈಸೂರು ಜಿಲ್ಲೆಗೆ ಟಾಪರ್ ಹಾಗೂ ರಾಜ್ಯಕ್ಕೆ ಎರಡನೇ ಸ್ಥಾನ‌ ಪಡೆದಿದ್ದಾರೆ.


Share this with Friends

Related Post