Fri. Jan 10th, 2025

ವಿಜೃಂಭಣೆಯಿಂದ ನೆರವೇರಿದ ಶ್ರೀ ಶನೇಶ್ಚರಸ್ವಾಮಿ ಜಯಂತಿ ಮಹೋತ್ಸವ

Share this with Friends

ಮೈಸೂರು, ಜೂ.3: ಮೈಸೂರಿನ ‌ಅಗ್ರಹಾರ,ಕೆ.ಆರ್.ಪೊಲೀಸ್ ಠಾಣೆ ಪಕ್ಕದಲ್ಲಿರುವ ಶ್ರೀ ಮಹಾ ಗಣಪತಿ ದೇವಸ್ಥಾನದ ಆವರಣದಲ್ಲಿ ಶ್ರೀ‌ ಶನೇಶ್ಚರ‌ಸ್ವಾಮಿ ಜಯಂತಿ ಮಹೋತ್ಸವ ವಿಜೃಂಭಣೆಯಿಂದ ‌ನೆರವೇರಿತು.

ದೇವಾಲಯದ ಮುಂಭಾಗದಲ್ಲಿ ದೊಡ್ಡ‌ ಪೆಂಡಾಲ್ ಹಾಕಲಾಗಿದ್ದು ಭಕ್ತರು ನಿಂತು‌ ಶನಿ ದೇವನನ್ನು ಕಣ್ ತುಂಬಿಕೊಳ್ಳಲು ನೆರವಾಯಿತು.ದೇವಾಲಯವನ್ನು ಹಾಗೂ ಗುಡಿಗಳನ್ನು ಬಾಳೆಕಂದು,ತಳಿರು ತೋರಣ,ವಿವಿಧ ಹೂಗಳು,ವಿದ್ಯುತ್ ‌ದೀಪಗಳಿಂದ ಅಲಂಕರಿಸಲಾಗಿತ್ತು.

ನವಗ್ರಹ ಗುಡಿ ಮುಂದೆ ಭವ್ಯವಾಗಿ ಅಲಂಕರಿಸಿದ್ದ ವೇದಿಕೆಯಲ್ಲಿ ಶ್ರೀ ಶನೈಶ್ಚರ‌ ಸ್ವಾಮಿಯನ್ನು ಪ್ರತಿಷ್ಟಾಪಿಸಲಾಯಿತು

ದೇವಾಲಯದಲ್ಲಿ ಶ್ರೀ‌ ಶನೇಶ್ಚರ‌ಸ್ವಾಮಿ ಜಯಂತಿ ಮಹೋತ್ಸವ‌ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಗಳು ನೆರವೇರಿದವು.

ಇಂದು ಅಮಾವಾಸ್ಯೆ ಕೂಡಾ ಇದ್ದು, ಉದಯ‌ ಲಗ್ನದಲ್ಲಿ ಪ್ರಾತಃಕಾಲ 6 ಗಂಟೆಯಿಂದ ರುದ್ರಾಭಿಷೇಕ,ತೈಲಾಭಿಷೇಕ,
ಗಣಪತಿ ಪೂಜೆ,ಹೋಮ,ನವಗ್ರಹ ಶಾಂತಿ ಹೋಮ,ಶನೇಶ್ಚರ ತಿಲಾ ಹೋಮ ಮತ್ತು ಮೃತ್ಯುಂಜಯ ಹೋಮ ಇತ್ಯಾದಿ ಕಾರ್ಯಗಳು ಶಿವಾರ್ಚಕರಾದ ಎಸ್.ಯೋಗಾನಂದ ಅವರ ನೇತೃತ್ವದಲ್ಲಿ ನೆರವೇರಿದವು.

ನಂತರ 9ರಿಂದ 11.30ರವರೆಗೆ ಪೂರ್ಣಾಹುತಿ ಮಾಡಲಾಯಿತು

ಪೂರ್ಣಾಹುತಿ ವೇಳೆ ದೇವಾಲಯದ ಪ್ರಾಂಗಣದಲ್ಲಿ ಪೂರ್ಣಾಹುತಿಗೆ‌‌ ಅರ್ಪಿಸುವ ಸಕಲ ವಸ್ತುಗಳನ್ನು ಪ್ರದಕ್ಷಣೆಯಲ್ಲಿ ತಂದು ಭಕ್ತರಿಂದ ಮುಟ್ಟಿಸಿ ಶಿವಾರ್ಚಕರಾದ ಎಸ್.ಯೋಗಾನಂದ ಅವರ ನೇತೃತ್ವದಲ್ಲಿ ಹೋಮ ಕುಂಡಕ್ಕೆ ಅರ್ಪಿಸಲಾಯಿತು.

12 ಗಂಟೆಗೆ ಮಹಾಮಂಗಳಾರತಿ ಮಾಡಿ ಆನಂತರ ಅನ್ನ ಸಂತರ್ಪಣೆ ಮಾಡಲಾಯಿತು.ಎಲ್ಲ ಕಾರ್ಯಗಳಲ್ಲೂ ನೂರಾರು ಭಕ್ತರು ಪಾಲ್ಗೊಂಡಿದ್ದರು.


Share this with Friends

Related Post