ಮೈಸೂರು,ಜೂ.8: ನರಸಿಂಹರಾಜ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಹಳೆ ಕೆಸರೆಯ ರಿದಾ ಸ್ಟೀಲ್ ಟ್ರೇಡರ್ಸ್ ನಲ್ಲಿ ಕ್ಲೋರಿನ್ ಸೋರಿಕೆಯಾಗಿ ಐದು ಮಂದಿ ಅಸ್ವಸ್ಥರಾಗಿದ್ದಾರೆ.
ವರುಣಾ ಚಾನಲ್ ಹಳೆ ಕೆಸರೆಯಲ್ಲಿರುವ ಮಹಮದ್ ಎಂಬುವವರ ಗುಜರಿ ಅಂಗಡಿಯಲ್ಲಿ ಈ ಘಟನೆ ನಡೆದಿದೆ.
ಅವರು ಮೂರು ತಿಂಗಳ ಹಿಂದೆ ದಾವಣಗೆರೆ ಯಿಂದ ಗುಜರಿ ಪದಾರ್ಥಗಳನ್ನ ಖರೀದಿಸಿದ್ದರು ಇದರಲ್ಲಿ ಕ್ಲೋರಿನ್ ಸಿಲಿಂಡರ್ ಗಳೂ ಇದ್ದವು.
ಒಂದರಲ್ಲಿ ಗ್ಯಾಸ್ ಇದ್ದು ಇದನ್ನು ತುಂಡು ಮಾಡುವಾಗ ಒಳಗಿದ್ದ ಕ್ಲೋರಿನ್ ಹೊರ ಬಂದಿದೆ, ಈ ಸಮಯದಲ್ಲಿ ಸಮೀಪದ ಮನೆಗಳಲ್ಲಿ ವಾಸ ಮಾಡುತ್ತಿದ್ದ ಕುಟುಂಬದ ಸುಮಾರು 5 ಮಂದಿಗೆ ಉಸಿರಾಟದ ತೊಂದರೆಯಿಂದ ಅಸ್ವಸ್ಥರಾಗಿದ್ದಾರೆ.
ರಿಂಗ್ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆ ಯಲ್ಲಿ ಅಸ್ವಸ್ಥರನ್ನ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ,ನಗರ ಪೊಲೀಸ್ ಆಯುಕ್ತ ಡಾ.ಬಿ.ರಮೇಶ್,ಡಿಸಿಪಿ ಮುತ್ತುರಾಜ್ ಹಾಗೂ ಜಾಹ್ನವಿ,ತಹಸೀಲ್ದಾರ್ ಮಹೇಶ್ ಕುಮಾರ್,ವಿ.ಎ.ಭಾಸ್ಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಎನ್.ಆರ್.ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.