Sat. Nov 2nd, 2024

ಕಾವೇರಿ ನೀರಿನ ಸಮಸ್ಯೆ ಬಗೆಹರಿಸಲು ಕಾರ್ಯ‌ಪ್ರವೃತ್ತರಾಗುವಂತೆ ಸಂಸದರಿಗೆ ಜೆಪಿ ಮನವಿ

Share this with Friends

ಮೈಸೂರು, ಜೂ.8: ರಾಜ್ಯದ ನೂತನ‌ ಸಂಸದರು ಕೂಡಲೇ ಕಾವೇರಿ ನೀರಿನ ಸಮಸ್ಯೆ ಬಗೆಹರಿಸಲು ಕಾರ್ಯ‌ಪ್ರವೃತ್ತರಾಗ ಬೇಕೆಂದು ಬಿ.ಜೆ.ಪಿ. ನಾಯಕರು, ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷರಾದ ಎಸ್.ಜಯಪ್ರಕಾಶ್ ಮನವಿ ಮಾಡಿದರು.

ಪ್ರತಿ ಶನಿವಾರದಂತೆ ಇಂದೂ ಕೂಡಾ ಕಾವೇರಿ ಕ್ರಿಯಾ ಸಮಿತಿಯು ಹಮ್ಮಿಕೊಂಡಿದ್ದ ರಾಷ್ಟ್ರಪತಿಗಳಿಗೆ, ಪ್ರಧಾನ ಮಂತ್ರಿಗಳಿಗೆ ಸಲ್ಲಿಸುವ ಮನವಿ ಪುಸ್ತಕಗಳಿಗೆ ಸಹಿ ಸಂಗ್ರಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಳೆದ 8-9 ತಿಂಗಳಿನಿಂದ ಕಾವೇರಿ ನೀರಿನ ವಿಚಾರದಲ್ಲಿ ನಮ್ಮ ರಾಜ್ಯಕ್ಕೆ ಅನ್ಯಾಯವಾಗುತ್ತಿದ್ದರೂ ಈ ಹಿಂದೆ ಇದ್ದ ಸಂಸದರು ಕೆ.ಆರ್.ಎಸ್. ಡ್ಯಾಂನಲ್ಲಿ ನೀರಿಲ್ಲದಿದ್ದರೂ ತಮಿಳುನಾಡಿಗೆ ನೀರನ್ನು ಹರಿಸುತ್ತಿದ್ದಾಗ ಮೌನವಾಗಿದ್ದರಿಂದ ಈ ಭಾಗದ ರೈತರು ಬೆಳೆ ಬೆಳೆಯಲು ಸಾಧ್ಯವಾಗಲಿಲ್ಲ ಎಂದು ಬೇಸರಪಟ್ಟರು.

ನಮ್ಮ ರಾಜ್ಯದ ರೈತರ ನೀರನ್ನೆಲ್ಲಾ ರಾಜ್ಯ ಸರ್ಕಾರ ತಮಿಳುನಾಡಿಗೆ ಬಿಡುವುದರಲ್ಲಿ ಯಶಸ್ವಿಯಾಗಿದೆ ಎಂದು ಎಸ್.ಜಯಪ್ರಕಾಶ್(ಜೆಪಿ)ಖಂಡಿಸಿದರು.

ಮೇಕೆದಾಟು ಯೋಜನೆ ಪ್ರಾರಂಭಿಸಬೇಕೆಂದು ಕೇಂದ್ರ ಹಾಗೂ ರಾಷ್ಟ್ರ ಸರ್ಕಾರಗಳನ್ನು ಒತ್ತಾಯಿಸಲು ಮುಂದಿನವಾರ ಮೇಕೆದಾಟು ಬಳಿ ಧರಣಿ ಕಾರ್ಯಕ್ರಮವನ್ನು ರೂಪಿಸಲಾಗುತ್ತಿದೆ ಎಂದು ಇದೇ ವೇಳೆ ಅವರು ತಿಳಿಸಿದರು.

ಇಂದಿನ ಧರಣಿ ಹಾಗೂ ಸಹಿ ಸಂಗ್ರಹ ಕಾರ್ಯಕ್ರಮದಲ್ಲಿ ತೇಜಸ್ ಲೋಕೇಶ್‌ಗೌಡ, ಒಕ್ಕಲಿಗ ಸಂಘದ ಶಿವಲಿಂಗಯ್ಯ,ಮೆಲ್ಲಹಳ್ಳಿ ಮಹದೇವಸ್ವಾಮಿ,ಮಂಜುಳ, ರೈತ ಮುಖಂಡರಾದ ವರಕೋಡು ಕೃಷ್ಣಗೌಡ ಭಾಗ್ಯಮ್ಮ, ಸಿಂಧೂವಳ್ಳಿ ಶಿವಕುಮಾರ್, ನಾಗರಾಜು, ಕೃಷ್ಣಪ್ಪ,ನೇಹ, ಮಹೇಶ್‌ ಗೌಡ, ಕಿಶೋರ್‌ಗೌಡ,ಬಿಳಿಕೆರೆ ಭಾಗ್ಯಮ್ಮ ಡಾ.ರಾಜ್ ಸಂಘದ ಮಹದೇವಸ್ವಾಮಿ, ಆಟೋ ಮಹದೇವ್. ಆಕ್ಟರ್, ರವೀಶ್, ಹೊನ್ನೇಗೌಡ, ಸೊಪ್ಪಿನಕೇರಿ ಚಂದ್ರು. ಮಂಡಿ ಮೊಹಲ್ಲಾ ಅಭಿ, ವಿದ್ಯಾರ್ಥಿ ಕ್ರಿಯಾಸಮಿತಿಯ ಸುದರ್ಶನ್, ಸಂಜಯ್ ರಾಜೇಶ್, ಕಿರಣ್, ಹೇಮಂತ್, ಪ್ರಜ್ವಲ್, ವಿಷ್ಣು, ಹರೀಶ್ ಮತ್ತಿತರರು ಭಾಗವಹಿಸಿದ್ದರು.


Share this with Friends

Related Post