Tue. Dec 24th, 2024

ಹೆಚ್ಚಿನ ಲಾಭ ನಂಬಿ ವೆಬ್ ಸೈಟ್‌ನಲ್ಲಿ ಹಣ ಹೂಡಿದ‌ ವ್ಯಕ್ತಿಗೆ 10.84 ಲಕ್ಷ ದೋಖಾ

Share this with Friends

ಮೈಸೂರು,ಜೂ.9: ಶೇರು ವಹಿವಾಟು ಮಾಡಿದರೆ ಹೆಚ್ಚಿನ ಲಾಭಾಂಶ ಬರುತ್ತದೆ ಎಂಬ ‌ವ್ಯಕ್ತಿಯೊಬ್ಬನ ಮಾತು ನಂಬಿ ನಾಗರೀಕರೊಬ್ಬರು ಹತ್ತು ಲಕ್ಷಕ್ಕೂ ಹೆಚ್ಚು ಹಣ ಕಳೆದುಕೊಂಡ ಘಟನೆ ನಡೆದಿದೆ.

ಹೆಚ್ಚು ಲಾಭ ಪಡೆಯುವ ಆಮಿಷಕ್ಕೆ ಒಳಗಾದ ಮೈಸೂರಿನ ವ್ಯಕ್ತಿಯೊಬ್ಬರು 10,84,460 ರೂಗಳನ್ನ ಕಳೆದುಕೊಂಡಿದ್ದಾರೆ.

ರಾಮಕೃಷ್ಣನಗರದ ನಿವಾಸಿ ಮಹಮದ್ ಶಿಬಿಲಿ ರೋಶನ್ ಹಣ ಕಳೆದುಕೊಂಡ ವ್ಯಕ್ತಿ.
ಇವರು ವಂಚಕನ ಮಾತನ್ನ ನಂಬಿ ಆತ ನೀಡಿದ ಸಲಹೆಯಂತೆ ವೆಂಚರ ಸೆಕ್ಯುರಿಟೀಸ್ ಎಂಬ ವೆಬ್ ಸೈಟ್ ನಲ್ಲಿ ಹಣ ಹೂಡಿದ್ದಾರೆ.

ನಂತರ ತಾವು ಮೋಸ ಹೋಗಿರುವುದಾಗಿ ಖಚಿತವಾಗಿ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.


Share this with Friends

Related Post