Mon. Apr 21st, 2025

ಬಸ್ ಮೇಲೆ ಉಗ್ರರ ದಾಳಿ‌ ಹತ್ತು ಮಂದಿ ಸಾವು

Share this with Friends

ಜಮ್ಮು,ಜೂ.9: ಇತ್ತ ನವದೆಹಲಿಯಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಾಗಲೇ ಅತ್ತ ಉಗ್ರರು ಅಟ್ಟಹಾಸ ಮೆರೆದಿದ್ದಾರೆ.

ಜಮ್ಮು ಕಾಶ್ಮೀರದ ಶಿವಪುರಿಯಲ್ಲಿ ಉಗ್ರರು ಯಾತ್ರಿಕರಿದ್ದ ಬಸ್ ಮೇಲೆ ಏಕಾಏಕಿ ದಾಳಿ ಮಾಡಿದ್ದಾರೆ.

ಈ‌‌ ವೇಳೆ‌ ಭಯದಲ್ಲಿ ಚಾಲಕ‌ ನಿಯಂತ್ರಣ ಕಳೆದುಕೊಂಡ ಕಾರಣ‌‌ ಬಸ್ ಕಣಿವೆಗೆ‌ ಉರುಳಿಬಿದ್ದಿದೆ.

ಇದರಿಂದಾಗಿ 10 ಮಂದಿ ಮೃತಪಟ್ಟಿದ್ದು 30ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿವೆ.

ಬಸ್ ಶಿವಕೋರಿಯಿಂದ ಕತ್ತರಕ್ಕೆ ತೆರಳುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದು‌ ಕಣಿವೆಯಿಂದ ಬಸ್ಸನ್ನು ಮೇಲೆತ್ತಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.ಗಾಯಗೊಂಡವರನ್ನು‌ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ.


Share this with Friends

Related Post