Thu. Dec 26th, 2024

ದಾಂಪತ್ಯದಲ್ಲಿ ಬಿರುಕು: ವಿಚ್ಛೇದನ ಕೋರಿ ನಟ ಯುವರಾಜ್ ಕುಮಾರ್ ಅರ್ಜಿ

Share this with Friends

ಬೆಂಗಳೂರು,ಜೂ.10: ಚಂದನ್ ಶಟ್ಟಿ ನಿವೇದಿತಾ ಗೌಡ ಅವರ ವಿಚ್ಚೇದನದ ಬೆನ್ನಲ್ಲೇ ದೊಡ್ಮನೆ ಹುಡುಗ ಯುವರಾಜ್‌ ಕುಮಾರ್‌ ಕೂಡಾ ವಿಚ್ಚೇದನಕ್ಕೆ ಮುಂದಾಗಿದ್ದಾರೆ.

ಡಾ. ರಾಜ್‌ ಕುಮಾರ್‌ ಕುಟುಂಬದ ಕುಡಿ, ದೊಡ್ಮನೆ ಹುಡುಗ ರಾಘವೇಂದ್ರ ರಾಜ್ ಕುಮಾರ್ ಪುತ್ರ ಯುವರಾಜ್‌ ಕುಮಾರ್‌ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಿದೆ.

ಪತ್ನಿ ಶ್ರೀದೇವಿಗೆ ವಿಚ್ಛೇದನ ಕೊಡಲು ಯುವರಾಜ ಕುಮಾರ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.

ಕಳೆದ 6 ತಿಂಗಳಿನಿಂದ ಯುವರಾಜ್‌ ಕುಮಾರ್‌ ಹಾಗೂ ಪತ್ನಿ ಶ್ರೀದೇವಿ ಬೇರೆ ಬೇರೆಯಾಗಿದ್ದು, ಇಬ್ಬರ ದಾಂಪತ್ಯದಲ್ಲಿ ಬಿರುಕು ಉಂಟಾಗಿದೆ ಎನ್ನಲಾಗಿದೆ.

ಯುವರಾಜ್‌ ಕುಮಾರ್‌ 2019 ರಲ್ಲಿ ಮೈಸೂರು ಮೂಲದ ಶ್ರೀದೇವಿ ಅವರನ್ನು ವಿವಾಹವಾಗಿದ್ದರು.

ಯುವರಾಜ್ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಪತ್ನಿ ಶ್ರೀದೇವಿಗೆ ನೋಟಿಸ್ ನೀಡಲಾಗಿದೆ ಎಂದು ಗೊತ್ತಾಗಿದೆ.


Share this with Friends

Related Post