Thu. Jan 9th, 2025

ಗುಣಮಟ್ಟದ ಆಹಾರ ಸೇವನೆ ಅಗತ್ಯ: ಮಂಜುನಾಥ್ ಸಲಹೆ

Share this with Friends

ಮೈಸೂರು,ಜೂ.10: ನಾವು ಸೇವಿಸುವ ಆಹಾರ ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯ ರಕ್ಷಿಸುವುದರಿಂದ ಗುಣಮಟ್ಟದ ಆಹಾರ ಸೇವಿಸುವುದು ಅಗತ್ಯ ಎಂದು ಕಡಕೋಳ ಹೆಲ್ತ್ ಇನ್ಸ್‌ಪೆಕ್ಟರ್ ಮಂಜುನಾಥ್ ಸಲಹೆ ನೀಡಿದರು.

ಎಸ್ ಪ್ರಕಾಶ್ ಪ್ರಿಯದರ್ಶನ ಸ್ನೇಹ ಬಳಗದ ವತಿಯಿಂದ ವಿಶ್ವ ಆಹಾರ ಸುರಕ್ಷತಾ ದಿನದ ಅಂಗವಾಗಿ ಮೈಸೂರಿನ ಸಿ ಎಸ್ ಐ ಗರ್ಲ್ಸ್ ಬೋರ್ಡಿಂಗ್ ವಸತಿ ನಿಲಯದಲ್ಲಿ ಮಕ್ಕಳಿಗೆ ಹಣ್ಣು ಹಾಗೂ ಓದುವ ಸಾಮಗ್ರಿಗಳನ್ನು ವಿತರಿಸಿ ಸುರಕ್ಷಿತ ಆಹಾರ ಸೇವನೆ ಕುರಿತು ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಮ್ಮ ದೈನಂದಿನ ಆಹಾರ ಕ್ರಮ ದೈಹಿಕ ಹಾಗೂ ಮಾನಸಿಕ ಯೋಗಕ್ಷೇಮ ಸೂಚಿಸುತ್ತದೆ,ಸುರಕ್ಷಿತ ಆಹಾರ ಮನುಷ್ಯನ ಸಮಗ್ರ ಯೋಗ ಕ್ಷೇಮಕ್ಕೆ ಅಗತ್ಯವಾಗಿದೆ, ಉತ್ತಮ ಆಹಾರ ಸೇವನೆ ಮಾಡಿ, ಕಲುಷಿತ ಆಹಾರ ಸೇವನೆ ಹಲವು ರೋಗಗಳಿಗೆ ಕಾರಣವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕಲುಷಿತ ಆಹಾರ ಸೇವನೆಯಿಂದ ಹರಡುವ ಕಾಯಿಲೆಗಳು ಕುಟುಂಬದ ಆರ್ಥಿಕ ಅಭಿವೃದ್ಧಿಗೆ ಸಮಸ್ಯೆಯಾಗುತ್ತದೆ ಎಂದು ಮಂಜುನಾಥ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಜೆಡಿಎಸ್ ಕಾರ್ಯಾಧ್ಯಕ್ಷ ಪ್ರಕಾಶ್ ಪ್ರಿಯದರ್ಶನ್, ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಹೂ ಮಹಾದೇವ್, ಸುಬ್ರಮಣಿ ,ಮಹಾದೇವ್, ಹರ್ಷಿತ್, ಅಕ್ಷಯ್ ಪ್ರಿಯದರ್ಶನ್ ಮತ್ತಿತರರು ಹಾಜರಿದ್ದರು.


Share this with Friends

Related Post