Mon. Dec 23rd, 2024

ದೆಹಲಿಯಲ್ಲಿ ತೀವ್ರಗೊಂಡ ರೈತರ ಪ್ರತಿಭಟನೆ: ಅಶ್ರುವಾಯು ಪ್ರಯೋಗ

Share this with Friends

ನವದೆಹಲಿ,ಫೆ.13: ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಷ್ಟ್ರ ರಾಜಧಾನಿ ದೆಹಲಿಯತ್ತ ಹೊರಟಿರುವ ಸಾವಿರಾರು ರೈತರ ಮೇಲೆ ಅಶ್ರುವಾಯು ಪ್ರಯೋಗ ಮಾಡಲಾಗಿದೆ.

ಪಂಜಾಬ್‌ ಮತ್ತು ಹರ್ಯಾಣ ನಡುವಿನ ಶಂಭು ಗಡಿಯಲ್ಲಿ ರೈತರು ಸೇರುತ್ತಿದ್ದಂತೆ ಪೊಲೀಸರು ಅವರತ್ತ ಅಶ್ರುವಾಯು ಪ್ರಯೋಗಿಸಿ ಅವರನ್ನು ಚದುರಿಸಲು ಯತ್ನಿಸಿದ್ದಾರೆ.

ಕೇಂದ್ರ ಸರ್ಕಾರದ ವಿರುದ್ಧ ರೈತರ ಈ ಬೃಹತ್‌ ದಿಲ್ಲಿ ಚಲೋ ಯಾತ್ರೆಯನ್ನು ತಡೆಯಲು ಪೊಲೀಸರು ಎಲ್ಲಾ ರೀತಿಯ ವ್ಯವಸ್ಥೆಯನ್ನು ಮಾಡಿದ್ದು, ದೆಹಲಿಯ ಗಡಿಗಳಾದ ಸಿಂಘು, ಟಿಕ್ರಿ ಮತ್ತು ಯಪಿ ಗೇಟ್‌ ಗಳನ್ನು ಸೀಲ್‌ ಮಾಡಿದ್ದಾರೆ.

ಹಲವೆಡೆ ಕಾಂಕ್ರೀಟ್‌ ಗೋಡೆಗಳು ಮತ್ತು ತಂತಿಗಳನ್ನು ಸಹಾ ಅಳವಡಿಸಲಾಗಿದೆ.

ಇದರ ನಡುವೆ ರೈತರು ದೆಹಲಿಯೊಳಗೆ ಬಂದರೆ ಬವಾನಾ ಕ್ರೀಡಾಂಗಣವನ್ನು ತಾತ್ಕಾಲಿಕ ಕಾರಾಗೃಹವಾಗಿ ಪರಿವರ್ತಿಸುವ ಕೇಂದ್ರದ ಮನವಿಯನ್ನು ದೆಹಲಿ ಸರ್ಕಾರ ತಿರಸ್ಕರಿಸಿದೆ.


Share this with Friends

Related Post