ಮೈಸೂರು,ಜೂ.11: ಪರಿಸರ ಸಮತೋಲನ ಕಾಪಾಡಲು ವಿದ್ಯಾರ್ಥಿಗಳು ಗಿಡಗಳನ್ನು ನೆಟ್ಟು ಸಂರಕ್ಷಿಸಬೇಕು ಎಂದು
ಸನ್ಮತಿ ಮಹಿಳಾ ಫೌಂಡೇಶನ್ ಅಧ್ಯಕ್ಷೆ ಸವಿತಾ ಗೋವಿಂದೇಗೌಡ ಹೇಳಿದರು.
ನಗರದ ವಿಜಯನಗರದ ಯೋಗ ನರಸಿಂಹಸ್ವಾಮಿ ದೇವಸ್ಥಾನ ಬಳಿ ಇರುವ ಸವಿ ನೆನಪು ಫೌಂಡೇಶನ್ ಅವರ ದಿವಂಗತ ಸಂಜೀವಯ್ಯ ಸ್ಮಾರಕ ವಸತಿ ಶಾಲೆಯ ಮಕ್ಕಳಿಗೆ ಸನ್ಮತಿ ಮಹಿಳಾ ಫೌಂಡೇಶನ್ ವತಿಯಿಂದ ಪರಿಸರ ದಿನಾಚರಣೆ ಅಂಗವಾಗಿ ಮಕ್ಕಳಿಗೆ ಊಟದ ತಟ್ಟೆ , ಶಾಲಾ ಶುಲ್ಕ ಮತ್ತು ನೋಟ್ ಪುಸ್ತಕ ಹಾಗೂ ವಿವಿಧ ಜಾತಿಯ ಗಿಡಗಳನ್ನು ವಿತರಿಸಿ ಮಕ್ಕಳಿಗೆ ಪರಿಸರ ಕಾಳಜಿಯ ಬಗ್ಗೆ ಅರಿವು ಮೂಡಿಸಿ ಮಾತನಾಡಿದರು.
ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ, ಭವಿಷ್ಯದ ಜನಾಂಗಕ್ಕೆ ಪರಿಸರವನ್ನು ಬೆಳೆಸಿ ಉಳಿಸಬೇಕಿದೆ ಎಂದು ಸವಿತಾ ಹೇಳಿದರು.
ಸನ್ಮಿತಿ ಫೌಂಡೇಶನ್ ಉಪಾಧ್ಯಕ್ಷೆ ಜ್ಯೋತಿ ವಾಸುದೇವ್, ಕಾರ್ಯದರ್ಶಿ ಮಂಜುಳಾ, ಕೋಮಲ, ನಿರ್ದೇಶಕರಾದ ಸುಜಾತ, ಪ್ರೇಮ, ರಾಣಿ, ಮಮತಾ ಶ್ರೀಧರ್ ,ರಾಜೇಶ್ವರಿ ನಾಗರಾಜ್, ಹೇಮ ರಮೇಶ್, ನಾಗರತ್ನ ಮತ್ತಿತರರು ಹಾಜರಿದ್ದರು.