Thu. Dec 26th, 2024

ಸೀಕ್ರೆಟ್ ಪ್ಲೇಸ್ ನಲ್ಲಿದ್ದ ಕೀ ಬಳಸಿ ನಗದು, ಚಿನ್ನಾಭರಣ ದೋಚಿದ ಖದೀಮರು

Share this with Friends

ಟಿ.ನರಸೀಪುರ,ಜೂ.12: ಸೀಕ್ರೆಟ್ ಪ್ಲೇಸ್ ನಲ್ಲಿ ಇರಿಸಿದ್ದ ಕೀ ಬಳಸಿ ಹಣ ಹಾಗೂ ಆಭರಣ ದೋಚಿರುವ ಘಟನೆ ಟಿ.ನರಸೀಪುರದಲ್ಲಿ ನಡೆದಿದೆ.

ಟಿ.ನರಸೀಪುರ ತಾಲೂಕು ತುಂಬಲ ಗ್ರಾಮದ ಬೆಳ್ಳಬೆಳಕು ಬಡಾವಣೆಯ ಸುಮ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದೆ.

ಗೋಲಕದಲ್ಲಿ ಇಡಲಾಗಿದ್ದ 80 ಸಾವಿರ ನಗದು ಹಾಗೂ ಬೀರುವಿನಲ್ಲಿದ್ದ 40 ಗ್ರಾಂ ಚಿನ್ನಾಭರಣ ದೋಚಿ ಖದೀಮರು ಪರಾರಿಯಾಗಿದ್ದಾರೆ.

ಮನೆಯಿಂದ ಹೊರಗಡೆ ಹೋಗುವಾಗ ಪತಿ ಅಥವಾ ಮಗನ ಅನುಕೂಲಕ್ಕಾಗಿ ಕೀಗಳನ್ನ ಸೀಕ್ರೆಟ್ ಜಾಗದಲ್ಲಿಟ್ಟು ಸುಮ ಹೋಗುತ್ತಿದ್ದರು.

ಇದನ್ನ ಗಮನಿಸಿದ್ದ ಖದೀಮರು ಸುಮ ಹಾಗೂ ಪತಿ ಮನೆಯಿಂದ ಹೊರಗಡೆ ತೆರಳಿದ ಅಗ ಸೀಕ್ರೆಟ್ ಪ್ಲೇಸ್ ನಲ್ಲಿದ್ದ ಕೀ ಬಳಸಿ ಹಣ,ಆಭರಣ ದೋಚಿದ್ದಾರೆ.

ಮಾಜಿ ಶಾಸಕ ಅಶ್ವಿನ್ ಕುಮಾರ್ ಅವರ ತೋಟದ ಮನೆಯ ಮುಂಭಾಗದಲ್ಲೇ ಕೃತ್ಯ ನಡೆದಿದ್ದು,ತೋಟದ ಮನೆಯಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ಕಳ್ಳರ ಚಹರೆ ಸೆರೆಯಾಗಿರುವ ಸಾಧ್ಯತೆ ಇದೆ ಎಂದು ಸುಮಾ ಪೊಲೀಸರಿಗೆ ತಿಳಿಸಿದ್ದಾರೆ.

ಸಿಸಿ ಕ್ಯಾಮರಾ ದೃಶ್ಯಗಳನ್ನ ಸಂಗ್ರಹಿಸಿರುವ ಟಿ.ನರಸೀಪುರ ಪೊಲೀಸರು ಖದೀಮರ ಬಂಧನಕ್ಕೆ ಬಲೆ ಬೀಸಿದ್ದಾರೆ.


Share this with Friends

Related Post