Mon. Dec 23rd, 2024

ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲೇ ಹೊಡೆದಾಡಿದ ಕಾರ್ಯಕರ್ತರು

Share this with Friends

ಕೋಲಾರ,ಫೆ.13: ಕೋಲಾರ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಎರಡು ಗುಂಪಿನ ಕಾರ್ಯಕರ್ತರು ಪರಸ್ಪರ ಹೊಡೆದಾಡಿದ್ದಾರೆ.

ಕಾಂಗ್ರೆಸ್ ‌ಕಚೇರಿಯಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಬೆಂಬಲಿಗರು ಮತ್ತು ಕೆ.ಎಚ್.ಮುನಿಯಪ್ಪ ಬೆಂಬಲಿಗರು ಕೈ,ಕೈ ಮಿಲಾಯಿಸಿದ್ದಾರೆ.

ಇಂದು ಕಾಂಗ್ರೆಸ್‌ ಕಚೇರಿಯಲ್ಲಿ ಬೂತ್‌ ಮಟ್ಟದ ಏಜೆಂಟರ ಸಭೆಯನ್ನು ಕರೆಯಲಾಗಿತ್ತು.

ಈ ವೇಳೆ ಜಿಲ್ಲಾ ಕಾಂಗ್ರೆಸ್‌‌ ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್ ಮೇಲೆ ಶಾಸಕ ಕೊತ್ತೂರು ಮಂಜುನಾಥ್ ಅವರ ಬೆಂಬಲಿಗರು ಏಕಾಏಕಿ ದಾಳಿ ಮಾಡಿದರು.

ಕೆಪಿಸಿಸಿ ಕಾರ್ಯದರ್ಶಿ ರಮೇಶ್ ಮತ್ತು ರಾಜಕುಮಾರ್ ಸಮ್ಮುಖದಲ್ಲೇ ಎರಡೂ ಗುಂಪುಗಳ ಬೆಂಬಲಿಗರು ಹೊಡೆದಾಡಿದ್ದು ಈ ಇಬ್ಬರೂ ಮೂಕ ಪ್ರೇಕ್ಷಕರಾಗಬೇಕಾಯಿತು.

ಜಗಳ ಹೆಚ್ಚಾಗುತ್ತಿದ್ದಂತೆ ಸಭೆಯಿಂದ ಮುನಿಯಪ್ಪ ಬೆಂಬಲಿಗ ಕಾರ್ಯಾಧ್ಯಕ್ಷ ಊರುಬಾಗಲು ಶ್ರೀನಿವಾಸ್ ಹೊರಗೆ ಹೋಗಿಬಿಟ್ಟರು.


Share this with Friends

Related Post