Wed. Dec 25th, 2024

ಖಾಸಗಿ ಫೋಟೋ ವೈರಲ್ ಮಾಡ್ತೀನಿ ಎಂದ ಪ್ರಿಯತಮನ ಹತ್ಯೆ ಮಾಡಿದ ಪ್ರಿಯತಮೆ

Share this with Friends

ನಂಜನಗೂಡು,ಜೂ.12: ಖಾಸಗಿ ಫೋಟೋ, ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಕ್ಕೆ ಪ್ರಿಯಕರನನ್ನ ನಂಜನಗೂಡಲ್ಲಿ ಹತ್ಯೆ ಮಾಡಲಾಗಿದೆ.

ಪ್ರಿಯತಮನನ್ನ ಪ್ರಿಯತಮೆ ಹಾಗೂ ಆಕೆಯ ಸಹೋದರ ಸೇರಿ ಭೀಕರವಾಗಿ ಕೊಂದಿರುವ ಘಟನೆ ನಂಜನಗೂಡಿನಲ್ಲಿ ನಡೆದಿದೆ.

ಹೆಚ್.ಡಿ.ಕೋಟೆ ಹಂಪಾಪುರ ಗ್ರಾಮದ ನಿವಾಸಿ ರಾಜೇಶ್ ಕೊಲೆಯಾದ ಪ್ರಿಯತಮ.

ರಾಜೇಶ್ ಮೇಲೆ ಕಲ್ಲುಚಪ್ಪಡಿ ಹಾಕಿ ಪ್ರಿಯತಮೆ ಪ್ರೇಮಾ ಹಾಗೂ ಆಕೆಯ ಸಹೋದರ ಶಿವು ಹತ್ಯೆ ಮಾಡಿದ್ದಾರೆ.

ಮೈಸೂರಿನ ಕ್ಯಾತಮಾರನಹಳ್ಳಿ ನಿವಾಸಿ ಪ್ರೇಮಾ 15 ವರ್ಷಗಳ ಹಿಂದೆ ನಂಜನಗೂಡಿನ ಶ್ರೀರಾಂಪುರ ನಿವಾಸಿಯನ್ನ ಮದುವೆ ಆಗಿದ್ದಳು.

ಒಂದು ತಿಂಗಳ ಹಿಂದೆ ಪ್ರೇಮಾಳ ಪತಿ ಮೃತಪಟ್ಟಿದ್ದರು,ಪ್ರೇಮಾ ಪತಿಗೆ ರಾಜೇಶ್ ಸ್ನೇಹಿತನಾಗಿದ್ದ,ಹಾಗಾಗಿ ಆಗಾಗ ಮನೆಗೆ ಬರುತ್ತಿದ್ದ ಇದರಿಂದ ಪ್ರೇಮಾಳ ಪರಿಚಯವಾಗಿತ್ತು.

ಈ ಪರಿಚಯ ಪ್ರೇಮಕ್ಕೆ ತಿರುಗಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದರು.ಕೆಲ ದಿನಗಳ ಹಿಂದೆ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿ ಮನಸ್ತಾಪವಾಗಿತ್ತು.

ಆಗ ರಾಜೇಶ್ ಇಬ್ಬರು ಇದ್ದ ಖಾಸಗಿ ಫೋಟೋ ಹಾಗೂ ಆಡಿಯೋಗಳನ್ನ ವೈರಲ್ ಮಾಡುವುದಾಗಿ ಪ್ರೇಮಾಗೆ ಬೆದರಿಕೆ ಹಾಕಿದ್ದಾನೆ.

ಈ‌ ಬಗ್ಗೆ ಮಾತನಾಡಬೇಕೆಂದು ಪ್ರೇಮಾ ನಿನ್ನೆ ರಾತ್ರಿ ರಾಜೇಶ್ ನನ್ನು ಮನೆಗೆ ಕರೆಸಿಕೊಂಡಿದ್ದಾಳೆ.

ಈ ವೇಳೆ ಪ್ರೇಮಾ ಹಾಗೂ ಆಕೆಯ ಸಹೋದರ ಶಿವು ಇಬ್ಬರೂ ಸೇರಿ ರಾಜೇಶ್ ಜತೆ ಕ್ಯಾತೆ ತೆಗೆದಿದ್ದಾರೆ.

ಅಪಾಯದ ಸುಳಿವ ಸಿಕ್ಕ ರಾಜೇಶ್ ಅಲ್ಲಿಂದ ತಪ್ಪಿಸಿಕೊಂಡು ಓಡಿದ್ದಾನೆ.ಆರ್.ಪಿ.ರಸ್ತೆಯ 8 ನೇ ಕ್ರಾಸ್ ಬಳಿ ಅಡ್ಡಹಾಕಿದ ಪ್ರೇಮಾ ಹಾಗೂ ಶಿವು ರಾಜೇಶ್ ತಲೆ ಮೇಲೆ ಕಲ್ಲು ಚಪ್ಪಡಿ ಹಾಕಿ ಭೀಕರವಾಗಿ ಕೊಂದಿದ್ದಾರೆ.

ವಿಷಯ ತಿಳಿದು ನಂಜನಗೂಡು ಪಟ್ಟಣ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದರು,ನಂತರ ಪ್ರೇಮ ಹಾಗೂ ಆಕೆಯ‌ ಸಹೋದರ ಶಿವು ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.


Share this with Friends

Related Post