Tue. Dec 24th, 2024

ಕಾಂಪೌಂಡ್ ಅವಶೇಷಕ್ಕೆ ಡಿಕ್ಕಿ ಹೊಡೆದುಚರಂಡಿಗೆ ಬಿದ್ದ ಸ್ಕೂಟರ್ ಸವಾರ

Share this with Friends

ಮೈಸೂರು,ಜೂ.12: ಮಳೆಗೆ ಕುಸಿದುಬಿದ್ದ ಕಾಂಪೌಂಡ್ ನಿಂದಾಗಿ ಸ್ಕೂಟರ್ ಸವಾರ ಚರಂಡಿಗೆ ಬಿದ್ದ ಘಟನೆ ಮೈಸೂರಿನಲ್ಲಿ ನಡೆದಿದೆ

ಗೋಕುಲಂ 3 ನೇ ಹಂತ 10 ನೇ ಕ್ರಾಸ್ ನಲ್ಲಿ ಇಎಸ್ ಐ ಆಸ್ಪತ್ರೆ ವಸತಿಗೃಹಗಳಿಗೆ ಹೊಂದಿಕೊಂಡಿರುವ ಕಾಂಪೌಂಡ್ ಮಳೆಗೆ ಕುಸಿದುಬಿದ್ದಿದೆ.

ಕುಸಿದುಬಿದ್ದ ಕಾಂಪೌಂಡ್ ತುಂಡುಗಳ ರಾಶಿಯಿಂದಾಗಿ ರಸ್ತೆ ಕಾಣಿಸದಂತಾಗಿದೆ. ಮುಖ್ಯ ರಸ್ತೆಯಿಂದ ಬಂದ ಸ್ಕೂಟರ್ ಸವಾರ ಕಾಂಪೌಂಡ್ ಗಳ ಅವಶೇಷಗಳ ರಾಶಿಗೆ ಡಿಕ್ಕಿ ಹೊಡೆದು ಹಾರಿ ಚರಂಡಿಗೆ ಬಿದ್ದಿದ್ದಾರೆ.

ತೀವ್ರ ಗಾಯಗೊಂಡ ಸ್ಕೂಟರ್ ಸವಾರನನ್ನ ವಿವಿ ಪುರಂಟ ಠಾಣೆ ಪೊಲೀಸರು ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕಾಂಪೌಂಡ್ ದುರಸ್ಥಿಗೊಳಿಸದ ಇಎಸ್ ಐ ಆಸ್ಪತ್ರೆ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೆಚ್ಚಿನ ಅನಾಹುತ ಆಗುವ ಮೊದಲು ಕಾಂಪೌಂಡ್ ಅವಶೇಷಗಳನ್ನು ತೆರವು ಮಾಡಿ ಹೊಸ ಗೋಡೆ ಕಟ್ಟಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.


Share this with Friends

Related Post