Fri. Apr 18th, 2025

ಬಸವಾದಿ ಶರಣರ ಸಂದೇಶವನ್ನು ಪಾಲಿಸಿ:ಬಸವಯೋಗಿಪ್ರಭುಗಳ ಸಲಹೆ

Share this with Friends

ನಂಜನಗೂಡು,ಜೂ.12: ಬಸವಾದಿ ಶರಣರ ಸಂದೇಶವನ್ನು ಪ್ರತಿಯೊಬ್ಬರು ಪಾಲಿಸುವುದು ಒಳ್ಳೆಯದು ಎಂದು ನರಸಿಂಹರಾಜಪುರ ಬಸವಕೇಂದ್ರದ ಬಸವಯೋಗಿಪ್ರಭುಗಳು ತಿಳಿಸಿದರು.

ವಿಶ್ವಗುರು ಬಸವೇಶ್ವರರ ಜಯಂತಿ ಅಂಗವಾಗಿ ಬ್ಯಾಂಡ್ ನ್ಯೂ ಗಿಪ್ಟ್ ಸೆಂಟರ್ ಮಾಲೀಕರೂ ಬಸವ ಭಕ್ತರಾದ ಆನಂದ್ ಅವರು ಹಮ್ಮಿಕೊಂಡಿದ್ದ ಸಾರ್ವಜನಿಕರಿಗೆ ಶಿವದಾನ (ಮಜ್ಜಿಗೆ) ದಾಸೋಹಕ್ಕೆ ಚಾಲನೆ ನೀಡಿ ಶ್ರೀಗಳು ಮಾತನಾಡಿದರು.

ಕಾಯಕ ದಾಸೋಹ ಬಸವಣ್ಣನವರು ಇಡೀ ವಿಶ್ವಕ್ಕೆ ನೀಡಿದ ದೊಡ್ಡ ಕೊಡುಗೆ,ಇದನ್ನು ಎಲ್ಲರೂ ಪಾಲಿಸಬೇಕು ಎಂದು ಅವರು ಸಲಹೆ ನೀಡಿದರು.

ಈ ವೇಳೆ ಆನಂದ್, ಕಾಯಕಯೋಗಿ ಸೇವಾ ಸಂಘದ ನಂಜುಡಸ್ವಾಮಿ, ಅಶೋಕ್, ನವೀನ್ ಕುಮಾರ್, ಬಸವ ಯೋಗಿಶ್, ಸಿದ್ದು ಚೆನ್ನಪ್ಪ, ಮಧು, ರಾಜಶೇಖರ ಮತ್ತಿತರರು ಹಾಜರಿದ್ದರು.


Share this with Friends

Related Post