ಬೆಂಗಳೂರು, ಜೂ.13: ಪ್ರತಿವರ್ಷ ಗೌರಿ ಗಣೇಶ ಹಬ್ಬ ಬಂದಾಗ ರಾಜ್ಯಾದ್ಯಂತ ಕೆರೆಕಟ್ಟೆಗಳು ಮಲಿನವಾಗುವುದು ತಪ್ಪುವುದೇ ಇಲ್ಲ.
ಗೌರಿ,ಗಣೇಶ ಮೂರ್ತಿಗಳನ್ನು ಹಬ್ಬ ಮುಗಿದ ಕೂಡಲೇ ಕೆರೆ,ಕಟ್ಟೆಗಳಿಗೆ ಬಿಡುವುದರಿಂದ ಜಲಚರಗಳ ಜೀವಕ್ಕೆ ಕುತ್ತು ತರುತ್ತದೆ.
ಪ್ಲಾಸ್ಟರ್ ಆಫ್ ಪ್ಯಾರೀಸ್ (ಪಿಒಪಿ)ಗೌರಿ, ಗಣಪತಿ ಮೂರ್ತಿಗಳ ವಿಸರ್ಜನೆಯಿಂದ ಜಲಮೂಲಗಳು ಕಲುಷಿತಗೊಳ್ಳುತ್ತಿವೆ.
ಹಾಗಾಗಿ ಈ ವರ್ಷ ಹಬ್ಬಕ್ಕೆ ಎರಡು ಮೂರು ತಿಂಗಳು ಇರುವಾಗಲೇ ಸರ್ಕಾರ ಎಚ್ಚೆತ್ತುಕೊಂಡಿದೆ.ಈ ಬಾರಿ ಮಣ್ಣಿನಿಂದ ಮಾಡಿದ ಗೌರಿ,ಗಣಪತಿ ಮೂರ್ತಿಗಳನ್ನು ತಯಾರಿಸುವಂತೆ ಸೂಚಿಸಿದೆ.
ಈ ಬಗ್ಗೆ ಮೊದಲೇ ತಿಳಿಸಿದ್ದರೆ, ಪಿಒಪಿ ಗೌರಿ, ಗಣಪತಿ ಮೂರ್ತಿಗಳನ್ನು ತಯಾರಿಸುತ್ತಿರಲಿಲ್ಲ ಎಂದು ಈ ಮಾದರಿಯ ಗಣಪತಿ ತಯಾರಕರು ಪ್ರತಿ ವರ್ಷ ಹೇಳುತ್ತಲೇ ಇರುತ್ತಾರೆ.
ಹಾಗಾಗಿ ಗೌರಿ,ಗಣಪತಿ ಮೂರ್ತಿ ತಯಾರಿಕೆ ಆರಂಭಿಸುವ ಮೊದಲೇ ನೋಟಿಸ್ ನೀಡುವಂತೆ ಅಧಿಕಾರಿಗಳಿಗೆ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಸೂಚಿಸಿದ್ದಾರೆ.