Sat. Jan 4th, 2025

ನೀಟ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಅನ್ಯಾಯ;ತನಿಖೆ ಆಗಲಿ:ಸಿಎಂ

Share this with Friends

ಮೈಸೂರು,ಜೂ.15: ವಿದ್ಯಾರ್ಥಿಗಳಿಗೆ ಅನ್ಯಾಯ ಆಗಬಾರದು,ಹಾಗಾಗಿ ನೀಟ್ ಮರು ಪರೀಕ್ಷೆ ಆಗಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ನೀಟ್ ಪರೀಕ್ಷೆಯಲ್ಲಿ ಕೆಲ ವಿದ್ಯಾರ್ಥಿಗಳಿಗೆ ಅನ್ಯಾಯ ಆಗಿದೆ,ಕೆಲವರು ರ್‍ಯಾಂಕ್ ಬಂದಿರೋರಿಗೂ ಅನ್ಯಾಯ ಆಗಿದೆ
ಮರು ಪರೀಕ್ಷೆ ಮಾಡಬೆಕು ಮತ್ತು ತನಿಖೆ ಕೂಡಾ ಆಗಬೇಕೆಂದು ಹೇಳಿದ್ದೇನೆ ಎಂದು ಸಿಎಂ ತಿಳಿಸಿದರು.

ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,
ಪಾಪ ವಿದ್ಯಾರ್ಥಿಗಳಿಗೆ ಅನ್ಯಾಯ ಆಗಬಾರದು,ಗ್ರೇಸ್ ಮಾರ್ಕ್ಸ್ ಕೊಟ್ಟು ಪಾಸ್ ಮಾಡುವುದು ಸರಿಯಲ್ಲ ಎಂದು ಹೇಳಿದರು.

ದಕ್ಷಿಣ ಭಾರತದಲ್ಲಿ ಬಿಜೆಪಿ ಯನ್ನು ಜನ ಬೆಂಬಲಿಸಲ್ಲ,ಬಿಜೆಪಿ ಆರ್ ಎಸ್ ಎಸ್ ಬೇಸ್ ಇರುವ ಪಾರ್ಟಿ,
ಆರ್.ಎಸ್.ಎಸ್ ನವರೇ ಹೇಳಿದ್ದಾರೆ
ಅಹಂಕಾರದಿಂದ ಬಿಜೆಪಿಯವರು ಸೋತಿದ್ದಾರೆ ಅಂತ.
ಬೆದರಿಸುವ ಸಂಸ್ಕೃತಿ ಬಿಜೆಪಿಯದು ಎಂದು ಸಿಎಂ ಟೀಕಿಸಿದರು.

ಯಡಿಯೂರಪ್ಪ ಮೇಲೆ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಬಿಜೆಪಿಯವರು ಆರೋಪಿಸಿದ್ದಾರಲ್ಲಾ ಎಂದು ಪ್ರಶ್ನೆಗೆ,
ನಮ್ಮ ಮೇಲೆ ಕೇಸ್ ಹಾಕಿದ್ರಲ್ಲಾ ಏನನ್ನಬೇಕು,ನನ್ನ ಮೇಲೆ ಡಿ.ಕೆ ಮೇಲೆ ರಾಹುಲ್ ಗಾಂಧಿ ಮೇಲೆ ಕೇಸ್ ಹಾಕಿಲ್ವಾ
ಅರವಿಂದ್ ಕ್ರೇಜಿವಾಲ್ ನ ಜೈಲಿಗೆ ಕಳುಹಿಸಿದ್ದಾರಲ್ವಾ,
ಇದೇನು ದ್ವೇಷದ ರಾಜಕಾರಣ, ಟಾರ್ಗೆಟ್ ಅಲ್ವಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ನಾನು ನಿನ್ನೆ ಮೊನ್ನೆ ರಾಜಕೀಯಕ್ಕೆ ಬಂದಿಲ್ಲ
ಟಾರ್ಗೆಟ್ ರಾಜಕೀಯ ಮಾಡಿಲ್ಲ, ಮಾಡಲೂ ಹೋಗುವುದಿಲ್ಲ ಎಂದು ಹೇಳಿದರು.

ಸ್ಥಳೀಯ ಸಂಸ್ಥೆಗಳಿಗೆ ಶೀಘ್ರದಲ್ಲೇ ಚುನಾವಣೆ ಮಾಡುತ್ತೇವೆ ಎಂದು ಇದೇ ವೇಳೆ ಸಿಎಂ ತಿಳಿಸಿದರು.


Share this with Friends

Related Post