Tue. Mar 10th, 2026

ಬಕ್ರೀದ್: ಗೋಹತ್ಯೆ ತಡೆಗೆ ಬಿಜೆಪಿಯ ರಾಕೇಶ್ ಗೌಡ ಒತ್ತಾಯ

Share this with Friends

ಮೈಸೂರು, ಜೂ.15: ಬಕ್ರೀದ್ ಹಬ್ಬಕ್ಕಾಗಿ
ನಮ್ಮ ಪವಿತ್ರ ಗೋವನ್ನು ಯಾರೂ ಹತ್ಯೆ ಮಾಡಬಾರದೆಂದು ಮೈಸೂರು ನಗರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಗೌಡ ಒತ್ತಾಯಿಸಿದ್ದಾರೆ.

ಹಸುವನ್ನು ಮುಕ್ಕೋಟಿ ದೇವರು ಎಂದು ಪ್ರಾರ್ಥಿಸುತ್ತಾರೆ. ಈಗಾಗಲೇ ಗೋ ಹತ್ಯೆ ವಿರುದ್ಧ ಕಾನೂನು ಜಾರಿಯಲ್ಲಿದ್ದು, ತಡವಾಗುವ ಮುನ್ನ ಗೋಹತ್ಯೆ ತಪ್ಪಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

ಯಾರೇ ಗೋಹತ್ಯೆ ಮಾಡಿದರೆ ಅಂತಹ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ರಾಕೇಶ್ ಗೌಡ ಒತ್ತಾಯಿಸಿದ್ದಾರೆ.

ಬಕ್ರೀದ್ ಹಬ್ಬದಲ್ಲಿ ಪ್ರಾಣಿಗಳ ವಧೆ ಆಗದಂತೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.


Share this with Friends

Related Post