ಮೈಸೂರು, ಜೂ.15: ಮೇಕೆದಾಟು ಯೋಜನೆ ಶೀಘ್ರ ಜಾರಿಗೆ ಒತ್ತಾಯಿಸಿ ಕಾವೇರಿ ಕ್ರಿಯಾಸಮಿತಿ ವತಿಯಿಂದ ಮೇಕೆದಾಟುವಿನಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಯಿತು.
ಶನಿವಾರ ಮಧ್ಯಾಹ್ನ 12 ಗಂಟೆಯಿಂದ 2 ಗಂಟೆ ವರೆಗೆ ಮೇಕೆದಾಟು ಬಳಿ ಕಾವೇರಿ ಕ್ರಿಯಾಸಮಿತಿ ಸದಸ್ಯರು ಧರಣಿ ಸತ್ಯಾಗ್ರಹ ನಡೆಸಿದರು.
ಕಾವೇರಿ ಕ್ರಿಯಾಸಮಿತಿ ಅಧ್ಯಕ್ಷ ಎಸ್. ಜಯಪ್ರಕಾಶ್ ನೇತೃತ್ವದಲ್ಲಿ ಸತ್ಯಾಗ್ರಹ ನಡೆಯಿತು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಮೂಗೂರು ನಂಜುಂಡಸ್ವಾಮಿ, ತೇಜೇಶ್ ಲೋಕೇಶ್ ಗೌಡ ಸೇರಿದಂತೆ ನೂರಾರು ಕಾವೇರಿ ಕ್ರಿಯಾಸಮಿತಿ ಹೋರಾಟಗಾರರು ಪಾಲ್ಗೊಂಡಿದ್ದರು.
ಈ ವೇಳೆ ಎಸ್. ಜಯಪ್ರಕಾಶ್,ಮಡ್ಡೀಕೆರೆ ಗೋಪಾಲ್, ಮೂಗೂರು ನಂಜುಂಡಸ್ವಾಮಿ, ತೇಜೇಶ್ ಲೋಕೇಶ್ ಗೌಡ ಮತ್ತಿತರರು ಮಾತನಾಡಿದರು.
ಪ್ರಧಾನ ಮಂತ್ರಿಗಳು ಮಲತಾಯಿ ಧೋರಣೆ ತೋರದೆ ಕನ್ನಡಿಗರಿಗೆ ಕಾವೇರಿ ನೀರಿನ ವಿಚಾರದಲ್ಲಿ ಶಾಶ್ವತ ಪರಿಹಾರ ಒದಗಿಸಬೇಕು ಮತ್ತು ಈಗ ನಮ್ಮ ರಾಜ್ಯದ ಕೇಂದ್ರ ಸರ್ಕಾರದ ಮಂತ್ರಿಗಳಾಗಿರುವವರು ನಮ್ಮ ಸಂಸದರು ರಾಜ್ಯದ ನೆಲ,ಜಲ,ಭಾಷೆ ಪರವಾಗಿ ಬದ್ದತೆಯಿಂದ ನಿಲ್ಲಬೇಕು, ಕಾವೇರಿ ಹಾಗೂ ಮೇಕೆದಾಟು ವಿಚಾರದಲ್ಲಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.