Mon. Dec 23rd, 2024

ಮಾಜಿ ಸಚಿವ ಗೋಪಾಲಯ್ಯಗೆ ಕಾರ್ಪೊರೇಟರ್ ಪದ್ಮರಾಜ್ ಕೊಲೆ ಬೆದರಿಕೆ

K. Gopalaiah
Share this with Friends

ಬೆಂಗಳೂರು: ಮಾಜಿ ಸಚಿವ ಗೋಪಾಲಯ್ಯ ಅವರಿಗೆ ಮಾಜಿ ಕಾರ್ಪೊರೇಟರ್ ಪದ್ಮರಾಜ್ ಕೊಲೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನಿನ್ನೆ ಗೋಪಾಲಯ್ಯ ಮನೆ ಹತ್ತಿರ ಬಂದು ಪದ್ಮರಾಜ್ ಗಲಾಟೆ ಮಾಡಿದ್ದು, ವೈಷಮ್ಯದಿಂದ ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ಕುರಿತು ಕಾಮಾಕ್ಷಿಪಾಳ್ಯ ಪೊಲೀಸ್ ಠಾಮೆಯಲ್ಲಿ ಗೋಪಾಲಯ್ಯ ದೂರು ದಾಖಲಿಸಿದ್ದಾರೆ. ಹೀಗಾಗಿ ಪೊಲೀಸರು ಪದ್ಮರಾಜ್ ಬಂಧಿಸಲು ಮನೆಗೆ ತೆರಳಿದ್ದು, ಗಲಾಟೆ ನಡೆದಿದೆ.

ಪದ್ಮರಾಜ್ ತಡರಾತ್ರಿ ಗೋಪಾಲಯ್ಯಗೆ ಕರೆ ಮಾಡಿ ಹಣ ಬೇಕೆಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಹಣ ಕೊಡದಿದ್ದರೆ ಏನು ಮಾಡ್ತೀನಿ ಗೊತ್ತಾ ಎಂದು ಬೆದರಿಕೆಯೊಡ್ಡಿದ್ದಾರೆ ಎಂದು ಗೋಪಾಲಯ್ಯ ದೂರು ದಾಖಲಿಸಿದ್ದಾರೆ. ಅಲ್ಲದೇ, ಸ್ಪೀಕರ್ ಮತ್ತು ಸಿಎಂಗೂ ದೂರು ಕೊಡಲು ಗೋಪಾಲಯ್ಯ ಮುಂದಾಗಿದ್ದಾರೆ.

ನಾನು ಪದ್ಮರಾಜ್‌ ಗೆ ಹಲವು ಬಾರಿ ಸಹಾಯ ಮಾಡಿದ್ದೇನೆ. ಆದರೆ ಈ ರೀತಿ ಕುಡಿದು ನಿಂದಿಸಿದ್ದು, ತುಂಬಾ ನೋವಾಗಿದೆ ಎಂದು ಮಾಜಿ ಸಚಿವ ಆರೋಪಿಸಿದ್ದಾರೆ. ಪೊಲೀಸರು ವಿಚಾರಣೆಗೆ ತೆರಳಿದಾಗ ಬಾಗಿಲು ತೆರೆಯದೆ ಗಲಾಟೆ ಮಾಡಿದ್ದಾರೆ ಎನ್ನಲಾಗಿದೆ.

ಕರೆ ಮಾಡಿ ಜೀವ ಬೆದರಿಕೆ ಹಾಕಿದ ಬೆನ್ನಲ್ಲೇ ನಾನು ಡಿಸಿಪಿ ಅವರಿಗೆ ಮಾಹಿತಿ ನೀಡಿದ್ದೀನಿ, ತಡರಾತ್ರಿಯೇ ಕಾಮಾಕ್ಷಿಪಾಳ್ಯ ಠಾಣೆಗೆ ದೂರು ನೀಡಿದ್ದೇನೆ ಎಂದು ಮಾಜಿ ಸಚಿವ ಕೆ ಗೋಪಾಲಯ್ಯ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ನಾಪತ್ತೆಯಾಗಿದ್ದ ತಾಯಿ,ಮಗಳು ನದಿಯಲ್ಲಿ ಶವವಾಗಿ ಪತ್ತೆ

ನಿನ್ನೆ ರಾತ್ರಿ 11 ಗಂಟೆ ವೇಳೆಗೆ ಪದ್ಮರಾಜ್ ಕರೆ ಮಾಡಿದ್ದ. ಸುಮಾರು 6 ನಿಮಿಷ ಮಾತನಾಡಿ ಬೆದರಿಕೆ ಹಾಕಿದ್ದಾನೆ. ಹಣ ಕೊಳ್ತಾನೆ, ನಾನು ಕೊಡಲು ನಿರಾಕರಿಸಿದಾಗ ನನ್ನ ಹಾಗೂ ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಹಾಕಿದ್ದಾನೆ. ಅತ್ಯಂತ ಕೆಟ್ಟ ಬಳಕೆ ಮಾಡಿ ನಿಂಧಿಸಿದ್ದಾನೆ. ಅಲ್ಲದೇ ಹುಡುಗರನ್ನು ಕಳುಹಿಸಿ ಚಿಂದಿ ಮಾಡ್ತೀನಿ ಅಂತ ಬೆದರಿಕೆ ಹಾಕಿದ್ದಾನೆ. ನನಗೆ ಮಾತ್ರ ಅಲ್ಲ ಈ ಹಿಂದೆಯೂ ಹಲವು ಶಾಸಕರು, ನಾಯಕರು ಸೇರಿದಂತೆ ಗಣ್ಯರಿಗೆ ಬೆದರಿಕೆ ಹಾಕಿದ್ದಾನೆ ಎಂದು ಬಿಜೆಪಿ ಶಾಸಕರು ವಿವರಿಸಿದರು.


Share this with Friends

Related Post