Thu. Jan 2nd, 2025

ರಾಜ್ಯದಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ

Share this with Friends

ಬೆಂಗಳೂರು,ಜೂ.15: ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಸರ್ಕಾರ ಪೆಟ್ರೋಲ್, ಡೀಸೆಲ್‌ ದರ ಏರಿಸಿ ವಾಹನ ಸವಾರರಿಗೆ ಶಾಕ್ ನೀಡಿದೆ.

ಪೆಟ್ರೋಲ್, ಡಿಸೇಲ್ ಮೇಲಿನ ಟ್ಯಾಕ್ಸ್ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದು,ರಿಟೇಲ್‌ ಸೇಲ್ಸ್‌ ಟ್ಯಾಕ್ಸ್‌ ದರ ಹೆಚ್ಚಳ ಮಾಡಲಾಗಿದೆ.

ಟ್ಯಾಕ್ಸ್ ಹೆಚ್ಚಳವಾಗಿದ್ದರಿಂದ ರಾಜ್ಯದಲ್ಲಿ ಪೆಟ್ರೋಲ್ ಬೆಲೆ 3 ರೂ., ಡಿಸೇಲ್ ಬೆಲೆ 3.50 ರೂಪಾಯಿ ಹೆಚ್ಚಳ‌ವಾಗಿದೆ.

ಈಗ ಪೆಟ್ರೋಲ್‌ ದರ 99.54 ರೂ. ಇದ್ದು,ಇನ್ನು ಮುಂದೆ 102 ರೂಪಾಯಿಗೆ ಏರಿಕೆಯಾಗಲಿದೆ. ಡೀಸೆಲ್‌ ದರ 85.93 ರೂಪಾಯಿ ಇದ್ದು ಅದು 89.43 ರೂ. ಏರಿಕೆಯಾಗಲಿದೆ.


Share this with Friends

Related Post